ಇನ್ಮುಂದೆ ಬ್ಲೂ ಟಿಕ್ ಪಡೆಯಲು ಹಣ ಪಾವತಿಸಿ ಎಂದ ಮಸ್ಕ್

ಗುರುವಾರ, 3 ನವೆಂಬರ್ 2022 (07:35 IST)
ವಾಷಿಂಗ್ಟನ್ : ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆಯೇ ಅದರ ಕಾರ್ಯವೈಖರಿ ಸೇರಿದಂತೆ ಹೆಚ್ಚಿನ ವಿಷಯಗಳು ಬದಲಾಗುತ್ತವೆ ಎಂದು ತಿಳಿಸಲಾಗಿತ್ತು.

ಅದರಂತೆಯೇ ಇದೀಗ ಮಸ್ಕ್ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಖಾತೆಗಳಿಗೆ ಪಾವತಿ ಮಾಡುವ ಹೊಸ ಯೋಜನೆಯನ್ನು ದೃಢಪಡಿಸಿದ್ದಾರೆ.

ಹಲವು ಟೀಕೆಗೆ ಒಳಗಾಗಿಯೂ ಮಸ್ಕ್ ಇದೀಗ ಬಳಕೆದಾರರ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಳ್ಳಬೇಕೆಂದರೆ ತಿಂಗಳಿಗೆ 8 ಡಾಲರ್ (ಸುಮಾರು 661 ರೂ.) ಪಾವತಿಸಬೇಕು ಎಂದಿದ್ದಾರೆ.

ಒಂದು ವೇಳೆ ಇಲ್ಲಿಯವರೆಗೆ ಬ್ಲೂ ಟಿಕ್ ಹೊಂದಿದ್ದ ಬಳಕೆದಾರರು ಪ್ರತಿ ತಿಂಗಳು ನಿಗದಿತ ಪಾವತಿಯನ್ನು ಮಾಡದೇ ಹೋದಲ್ಲಿ ತಮ್ಮ ಬ್ಲೂ ಟಿಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಪ್ರಸ್ತುತ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಅಥವಾ ಹೊಂದದೇ ಇರುವ ಬಳಕೆದಾರರ ವ್ಯವಸ್ಥೆ ಮೂರ್ಖತನವಾಗಿದೆ. ಈಗ ಎಲ್ಲಾ ಶಕ್ತಿ ಜನರಿಗೆ! ಬ್ಲೂ ಟಿಕ್ ಬೇಕೆಂದರೆ ತಿಂಗಳಿಗೆ 8 ಡಾಲರ್ ಪಾವತಿಸಿ ಎಂದು ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ