ಪಾಕಿಸ್ತಾನ ಪ್ರಧಾನಿಯಾಗಲಿರುವ ಇಮ್ರಾನ್ ಖಾನ್ ಪದಗ್ರಹಣಕ್ಕೆ ಹೋಗಲಿರುವ ಭಾರತೀಯ ಗಣ್ಯರು ಯಾರೆಲ್ಲಾ ಗೊತ್ತಾ?

ಶುಕ್ರವಾರ, 3 ಆಗಸ್ಟ್ 2018 (09:38 IST)
ಇಸ್ಮಾಮಾಬಾದ್: ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಕ್ರಿಕೆಟಿಗನಾಗಿರುವುದರಿಂದ ಇಮ್ರಾನ್ ಗೆ ಭಾರತದಲ್ಲೂ ಹಲವು ಗೆಳೆಯರಿದ್ದಾರೆ.

ಕ್ರಿಕೆಟ್, ಬಾಲಿವುಡ್ ಲೋಕದ ಹಲವರು ಇಮ್ರಾನ್ ಖಾನ್ ಸ್ನೇಹಿತರು. ಹೀಗಾಗಿ ಈ ಸ್ನೇಹ ಎರಡೂ ದೇಶಗಳ ಮಧ್ಯೆ ಸೌಹಾರ್ದಯುತ ವಾತಾವರಣಕ್ಕೆ ನಾಂದಿ ಹಾಡಲಿ ಎನ್ನುವುದು ಎಲ್ಲರ ಸದಾಶಯ.

ಈಗಾಗಲೇ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದು ಪ್ರಮಾಣ ವಚನ ಸಮಾರಂಭಕ್ಕೆ ಹೋಗುವುದಾಗಿ ಹೇಳಿದ್ದಾರೆ. ಇವರ ಜತೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಬಾಲಿವುಡ್ ನಟ ಅಮೀರ್ ಖಾನ್ ಮುಂತಾದವರಿಗೂ ಇಮ್ರಾನ್ ಆಹ್ವಾನವಿತ್ತಿದ್ದಾರಂತೆ. ಆದರೆ ಇವರೆಲ್ಲಾ ಹೋಗುತ್ತಾರಾ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಆದರೆ ಇತರ ದೇಶದ ನಾಯಕರನ್ನು ಆಹ್ವಾನಿಸುತ್ತಿಲ್ಲ ಎಂದು ಇಮ್ರಾನ್ ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ. ಹಾಗಿದ್ದರೂ ಇತರ ಪ್ರಧಾನಿಗಳಂತೆ ಮಾಡದೇ ಇಮ್ರಾನ್ ಭಾರತದ ತಮ್ಮ ಸ್ನೇಹಿತರನ್ನು ಪ್ರಮಾಣ ವಚನಕ್ಕೆ ಆಹ್ವಾನಿಸುವ ಮೂಲಕ ರಾಜತಾಂತ್ರಿಕವಾಗಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ