ಆಗಸ್ಟ್ 14ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಇಮ್ರಾನ್ ಖಾನ್‌

ಸೋಮವಾರ, 30 ಜುಲೈ 2018 (06:51 IST)
ಪಾಕಿಸ್ತಾನ : ಜುಲೈ 25ರಂದು ನಡೆದ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಟಿಐ ಪಕ್ಷದ ಇಮ್ರಾನ್ ಖಾನ್‌ ಆಗಸ್ಟ್ 14ರಂದು ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್‌-ಇ-ಇನ್ಸಾಫ್‌ ಪ್ರಕಟಿಸಿದೆ.


ಪಾಕಿಸ್ತಾನ ಚುನಾವಣೆ ಆಯೋಗ ಪ್ರಕಟಿಸಿದ ಪ್ರಾಥಮಿಕ ಫಲಿತಾಂಶಗಳ ಪ್ರಕಾರ 115 ಸ್ಥಾನಗಳನ್ನು ಪಿಟಿಐ ಗೆದ್ದಿದ್ದು ಬಹುಮತ ಪಡೆಯಲು ಇನ್ನೂ 12 ಸ್ಥಾನಗಳು ಬೇಕಾಗಿದೆ. ಪಿಎಂಎನ್‌-ಎಲ್‌ ಮತ್ತು ಪಿಪಿಪಿ ಕ್ರಮವಾಗಿ 64 ಮತ್ತು 43 ಸ್ಥಾನಗಳನ್ನು ಗೆದ್ದಿವೆ.
ಇದೀಗ ‘ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ ದಾಟಲು ಸಣ್ಣ ಪುಟ್ಟ ಪಕ್ಷಗಳು ಹಾಗೂ ಪಕ್ಷೇತರರ ನೆರವು ಪಡೆಯಲಾಗುವುದು. ಅದಕ್ಕಾಗಿ ನಾವು ನಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಅವರು ಆಗಸ್ಟ್‌ 14ರೊಳಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ' ಎಂದು ಪಿಟಿಐ ವಕ್ತಾರ ನಯೀನುಲ್ ಹಕ್ ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ