ಜರ್ಮನಿ-ಜಪಾನ್ ಬಗ್ಗೆ ಮೂರ್ಖತನದ ಹೇಳಿಕೆ ನೀಡಿ ಟ್ರೋಲ್ ಆದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಬುಧವಾರ, 24 ಏಪ್ರಿಲ್ 2019 (06:59 IST)
ಇಸ್ಲಾಮಾಬಾದ್: ಜರ್ಮನಿ ಮತ್ತು ಜಪಾನ್ ಗಡಿ ಹಂಚಿಕೊಳ್ಳುತ್ತವೆ ಎಂದು ಮೂರ್ಖತನದ ಹೇಳಿಕೆ ನೀಡಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್ ಗೊಳಗಾಗಿದ್ದಾರೆ.


ಎರಡೂ ರಾಷ್ಟ್ರಗಳೂ ಸುಮಾರು 9000 ಕಿ.ಮೀ. ದೂರದಲ್ಲಿವೆ. ಜಪಾನ್ ಪೂರ್ವ ಏಷ್ಯಾದಲ್ಲಿದ್ದರೆ, ಜರ್ಮನಿ ಯುರೋಪ್ ನಲ್ಲಿದೆ.  ಪಾಕಿಸ್ತಾನಿ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದು ಇದರಲ್ಲಿ ಇಮ್ರಾನ್ ಖಾನ್ ಎರಡೂ ರಾಷ್ಟ್ರಗಳು ಗಡಿಯಲ್ಲಿ ಉತ್ತಮ ಬಾಂಧವ್ಯ ಸೃಷ್ಟಿಸಿವೆ ಎಂದಿದ್ದಾರೆ.

ಇದೀಗ ಇಮ್ರಾನ್ ಅಜ್ಞಾನಕ್ಕೆ ಟ್ವಿಟರಿಗರು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಜನ ಲೇವಡಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಮಾತನಾಡುವಾಗ ಈ ರೀತಿ ಒಂದು ದೇಶದ ಪ್ರಧಾನಿ ತಪ್ಪಾಗಿ ಮಾತನಾಡಿದ್ದು ಲೇವಡಿಗೊಳಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ