ಏಷ್ಯಾ ಕಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಿಸಿಸಿಐ ತಗಾದೆ

ಶುಕ್ರವಾರ, 27 ಜುಲೈ 2018 (09:13 IST)
ಮುಂಬೈ: ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ ನಲ್ಲಿ ಪರಸ್ಪರ ಸೆಣಸಲಿರುವ ವಿಚಾರ ಈಗಾಗಲೇ ಕ್ರಿಕೆಟ್ ಪ್ರೇಮಿಗಳನ್ನು ಕುತೂಹಲದಲ್ಲಿರಿಸಿದೆ. ಆದರೆ ಪಂದ್ಯದ ಬಗ್ಗೆ ಬಿಸಿಸಿಐ ತಗಾದೆ ತೆಗೆದಿದೆ.

ಇದಕ್ಕೆ ಕಾರಣ ಪಂದ್ಯದ ವೇಳಾಪಟ್ಟಿ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪಂದ್ಯ ಸೆಪ್ಟೆಂಬರ್ 19 ಕ್ಕೆ ನಿಗದಿಯಾಗಿದೆ. ಆದರೆ ಸೆಪ್ಟೆಂಬರ್ 18 ಕ್ಕೆ ಟೀಂ ಇಂಡಿಯಾ ಅರ್ಹತಾ ಪಂದ್ಯ ಆಡಬೇಕಿದೆ.

ಒಂದು ಪಂದ್ಯವಾಡಿ ಒಂದೂ ದಿನದ ಬಿಡುವಿಲ್ಲದೇ ಪಾಕಿಸ್ತಾನದ ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾ ತಯಾರಾಗುವುದು ಹೇಗೆ? ಇದೆಂಥಾ ತಲೆಬುಡವಿಲ್ಲದ ವೇಳಾಪಟ್ಟಿ ಎಂದು ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿದೆ. ಅತ್ತ ಪಾಕಿಸ್ತಾನಕ್ಕೂ ಅರ್ಹತಾ ಪಂದ್ಯವಿದ್ದು, ಅದು ಸೆಪ್ಟೆಂಬರ್ 16 ಕ್ಕೆ ನಿಗದಿಯಾಗಿದೆ. ಅಂದರೆ ಭಾರತದ ವಿರುದ್ಧ ಪಂದ್ಯಕ್ಕೆ ತಯಾರಾಗಲು ಅದಕ್ಕೆ ಮೂರು ದಿನಗಳ ಸಮಯ ಸಿಗುತ್ತದೆ. ಆದರೆ ಭಾರತಕ್ಕೆ ಮಾತ್ರ ಬಿಡುವಿಲ್ಲದ ವೇಳಾಪಟ್ಟಿ ಯಾಕೆ ಎಂದು ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ