ವಾಷಿಂಗ್ಟನ್ : ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಖಲಿಸ್ತಾನಿ ಹೋರಾಟಗಾರರ ಆಕ್ರೋಶ ಎದುರಿಸಿದ ಘಟನೆ ಬುಧವಾರ ನಡೆದಿದೆ. ಅಲ್ಲದೆ ಅದರ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಯಾನ್ಫ್ರಾನ್ಸಿಸ್ಕೋದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಖಲಿಸ್ತಾನಿ ಸಂಘಟನೆಯ ಬೆಂಬಲಿಗರು ರಾಹುಲ್ ಗಾಂಧಿಯವರ ಭಾಷಣದ ನಡುವೆ “ಖಲಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ಖಲಿಸ್ತಾನದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಮಂದಹಾಸದಲ್ಲೇ ಉತ್ತರ ಕೊಟ್ಟ ರಾಹುಲ್ ದ್ವೇಷದ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕು ಎಂದಿದ್ದಾರೆ.
ಇದಾದ ಬಳಿಕ ಅಮೆರಿಕದಲ್ಲಿ ನೆಲಸಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ವಿಡಿಯೋ ಒಂದನ್ನು ಹರಿಬಿಟ್ಟಿದ್ದಾನೆ. ಅದರಲ್ಲಿ ರಾಹುಲ್ ಗಾಂಧಿ ಅಮೆರಿಕದಲ್ಲಿ ಎಲ್ಲೇ ಹೋದರೂ ಖಲಿಸ್ತಾನಿಗಳೇ ಸಿಗಲಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.