ಮಾತುಕತೆ ಮಾಡಿದ್ರೂ ಚೀನಾ ನಂಬದ ಭಾರತ

ಶುಕ್ರವಾರ, 26 ಜೂನ್ 2020 (09:05 IST)
ನವದೆಹಲಿ: ಗಡಿಯಲ್ಲಿ ಉದ್ವಿಗ್ನ ವಾತಾವರಣ ತಿಳಿಗೊಳಿಸಲು ಭಾರತ-ಚೀನಾ ನಡುವೆ ಅಧಿಕಾರಿಗಳ ಮಟ್ಟದ ಸಭೆ ನಡೆದಿರಬಹುದು. ಆದರೆ ಏನೇ ಶಾಂತಿ ಮಾತುಕತೆಯಾದರೂ ಸದ್ಯಕ್ಕೆ ಚೀನಾವನ್ನು ನಂಬುವ ಸ್ಥಿತಿಯಲ್ಲಿ ಭಾರತವಿಲ್ಲ.


ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಗಡಿಯಲ್ಲಿ ಸೈನ್ಯಕ್ಕೆ ಹೆಚ್ಚುವರಿ ಅಧಿಕಾರ ನೀಡುವುದರ ಜತೆಗೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಯಾವುದೇ ಸನ್ನಿವೇಶವನ್ನೂ ಎದುರಿಸುವ ರೀತಿಯಲ್ಲಿ ಸೇನೆಯನ್ನು ಸನ್ನದ್ಧಗೊಳಿಸಲಾಗುತ್ತಿದೆ. ಅತ್ತ ಚೀನಾವೂ ಮಾತುಕತೆಯ ಬಳಿಕವೂ ಹೆಚ್ಚುವರಿ ಸೇನೆ ನಿಯೋಜನೆ ನಡೆಸಿದೆ. ಹೀಗಾಗಿ ಭಾರತವೂ ಸರ್ವ ಸನ್ನದ್ಧವಾಗಿ ನಿಂತಿದೆ.

ಇದರ ಜತೆಗೆ ಚೀನಾಕ್ಕೆ ಆರ್ಥಿಕವಾಗಿ ಪೆಟ್ಟು ನೀಡುವ ಕೆಲಸ ಮುಂದುವರಿದಿದೆ. ಈಗಾಗಲೇ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಟ್ರೆಂಡ್ ಹೆಚ್ಚಾಗಿದೆ. ಜತೆಗೆ ಸರ್ಕಾರವೂ ಚೀನಾ ಮೂಲದ ಕಂಪನಿಗಳಿಗೆ ಲಾಭ ಮಾಡಿಕೊಡುವ ಅನೇಕ ಒಪ್ಪಂದಗಳು, ಯೋಜನೆಗಳನ್ನು ಹಂತ ಹಂತವಾಗಿ ಕಡಿದು ಸ್ವದೇಶೀ ಕಂಪನಿಗಳಿಗೆ ಪ್ರೋತ್ಸಾಹ ನೀಡುವ ಕೆಲಸಕ್ಕೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ