ಭಾರತ-ಚೀನಾ ನಡುವೆ 15 ಗಂಟೆಗಳ ದಾಖಲೆಯ ಮಾತುಕತೆ

ಬುಧವಾರ, 15 ಜುಲೈ 2020 (10:27 IST)
ನವದೆಹಲಿ: ಗಡಿಯಲ್ಲಿ ಸೇನೆ, ಶಸ್ತ್ರಾಸ್ತ್ರಗಳನ್ನು ಹಿಂಪಡೆಯುವ ಕುರಿತಂತೆ ಭಾರತ ಮತ್ತು ಚೀನಾ ನಡುವಿನ ಅಧಿಕಾರಿಗಳ ಮಟ್ಟದ ಸಭೆ ದಾಖಲೆಯ 15 ಗಂಟೆಗಳ ಕಾಲ ನಡೆದಿದೆ. ಇದೊಂದು ಹೊಸ ದಾಖಲೆಯಾಗಿದೆ.


ನಿನ್ನೆ 11.30 ಕ್ಕೆ ಆರಂಭವಾಗಿದ್ದ ಸಭೆ ಇಂದು ಬೆಳಗಿನ ಜಾವ 2.30 ರವರೆಗೆ ಮುಂದುವರಿದಿದೆ. ಈ ಮೂಲಕ ಸುದೀರ್ಘ ಸಮಯದ ಮಾತುಕತೆ ಎಂಬ ದಾಖಲೆ ಸೃಷ್ಟಿಸಿದ್ದಾರೆ.

ಈ ಮಾತುಕತೆ ವೇಳೆ ಭಾರತೀಯ ಅಧಿಕಾರಿಗಳು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಪ್ಯಾನ್ ಗಾಂಗ್ ಸರೋವರ, ಲಡಾಖ್, ಡೆಪ್ಸಾಂಗ್ ಪ್ರದೇಶದಿಂದ ಸೇನೆ, ಶಸ್ತ್ರಾಸ್ತ್ರಗಳ ಟ್ಯಾಂಕರ್ ಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ