ನೇಪಾಳ ಪ್ರಧಾನಿ ಕೆಪಿ ಒಲಿ ಖುರ್ಚಿ ಉಳಿಸಿಕೊಳ್ಳಲು ಚೀನಾ ಹರಸಾಹಸ

ಶನಿವಾರ, 11 ಜುಲೈ 2020 (11:49 IST)
ಕಠ್ಮಂಡು: ನೇಪಾಳದಲ್ಲಿ ಕೆಪಿ ಒಲಿ ಪ್ರಧಾನಿಯಾಗಿ ಮುಂದುವರಿದರೆ ಭಾರತದ ವಿರುದ್ಧ ತನ್ನ ಬೇಳೆ ಬೇಯಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಅರಿತಿರುವ ಚೀನಾ ಅಲ್ಲಿನ ಸರ್ಕಾರ ಉರುಳಿ ಬೀಳದಂತೆ ಪ್ರಯತ್ನ ನಡೆಸಿದೆ.


ಕೆಪಿ ಒಲಿ ಬಗ್ಗೆ ಸ್ವಪಕ್ಷೀಯರಿಂದಲೇ ರಾಜೀನಾಮೆಗೆ ಒತ್ತಾಯ ಕೇಳಿಬಂದಿರುವ ಹಿನ್ನಲೆಯಲ್ಲಿ ಆಡಳಿತಾರೂಢ ಎನ್ ಸಿಪಿ ಪಕ್ಷದ ಸ್ಥಾಯಿ ಸಮಿತಿ ಸಭೆಯನ್ನು ಒಂದು ವಾರದ ಕಾಲ ಮುಂದೂಡಿಕೆ ಮಾಡಲು ಪ್ರಭಾವ ಬೀರುವಲ್ಲಿ ಚೀನಾ ರಾಯಭಾರಿ ಹೌ  ಯಾಂಕಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಇನ್ನು ಒಂದು ವಾರ ಕಾಲ ಕೆಪಿ ಒಲಿ ಸ್ಥಾನ ಭದ್ರವಾಗಿರಲಿದೆ.

ಈ ಸಂದರ್ಭವನ್ನೇ ಬಳಸಿಕೊಂಡು ಯಾಂಕಿ ನೇಪಾಳದಲ್ಲಿ ಬಂಡಾಯವೆದ್ದಿರುವ ನಾಯಕರನ್ನು ಮನ ಒಲಿಸುವ ಕೆಲಸ ಮಾಡಲು ಹೊರಟಿದ್ದಾರೆ. ಆ ಮೂಲಕ ಶತಾಯಗತಾಯ ಕೆಪಿ ಒಲಿ ಸರ್ಕಾರ ಉಳಿಸಲು ಚೀನಾ ತೆರೆಮರೆಯ ಪ್ರಯತ್ನ ಮುಂದುವರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ