ಸುಳ್ಳುಗಳ ಮೂಟೆ ಬಿಟ್ಟ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲೇ ತಿರುಗೇಟು ಕೊಟ್ಟ ಭಾರತ
ವಿಶ್ವ ಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್, ಭಾಷಣದುದ್ದಕ್ಕೂ ಡೊನಾಲ್ಡ್ ಟ್ರಂಪ್ ಹೊಗಳಿದ್ದೇ ಹೊಗಳಿದ್ದು. ಇದರ ಜೊತೆಗೆ ತಮ್ಮ ದೇಶ ಭಾರತದ ಅಪ್ರಚೋದಿತ ದಾಳಿಗೆ ಬಲಿಯಾಗಿತ್ತು. ನಾವು ಭಾರತದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೆವು ಎಂದೆಲ್ಲಾ ಸುಳ್ಳುಗಳ ಪುರಾಣವನ್ನೇ ಹೇಳಿದ್ದರು.
ಇದಕ್ಕೆ ಭಾರತ ಈಗ ವಿಶ್ವಸಂಸ್ಥೆಯಲ್ಲೇ ತಿರುಗೇಟು ನೀಡಿದೆ. ಭಾರತದ ರಾಜತಾಂತ್ರಿಕ ರಾಯಭಾರಿ ಪೆಟಲ್ ಗೆಹ್ಲೋಟ್, ಪಾಕಿಸ್ತಾನದ ಕುತಂತ್ರವನ್ನು ಬಯಲಿಗೆಳೆದಿದ್ದಾರೆ. ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನ ರಕ್ಷಿಸುತ್ತಿದೆ. ಒಸಾಮ ಬಿನ್ ಲಾಡೆನ್ ಗೆ ಆಶ್ರಯ ನೀಡಿದ್ದೂ ಇದೇ ಪಾಕಿಸ್ತಾನ. ಕಾಶ್ಮೀರದ ಪ್ರವಾಸಿಗರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಭಯೋತ್ಪಾದಕರನ್ನು ರಕ್ಷಿಸಿದ್ದೂ ಇದೇ ಪಾಕಿಸ್ತಾನ. ಪಾಕಿಸ್ತಾನವು ಮೊದಲಿನಿಂದಲೂ ಭಯೋತ್ಪಾದನೆಯನ್ನು ರಫ್ತ ಮಾಡುವುದರಲ್ಲಿ, ಹುಟ್ಟು ಹಾಕುವುದರಲ್ಲಿ ತೊಡಗಿಸಿಕೊಂಡಿದೆ. ಈ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ತಕ್ಕ ತಿರುಗೇಟು ನೀಡಿದ್ದಾರೆ.