India Pakistan: ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ತಾಕತ್ತು ಭಾರತಕ್ಕಿಲ್ಲ, ಅದಕ್ಕೆ ನಾವು ಬಿಡುವುದೂ ಇಲ್ಲ: ಉಗ್ರ ಗುರುಪತ್ವಂತ್ ಸಿಂಗ್ ಪನ್ನು
ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಇದರ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಭಾರತಕ್ಕೆ ಸವಾಲು ಹಾಕಿದ್ದು ಪಾಕಿಸ್ತಾನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾನೆ.
ಭಾರತೀಯ ಸೇನೆ ಪಂಜಾಬ್ ಮೂಲಕ ಹಾದುಹೋಗಲು ಮತ್ತು ಪಾಕಿಸ್ತಾನದ ಮೇಲೆ ದಾಳಿ ಮಾಅಡಲು ನಾವು ಬಿಡಲ್ಲ. ಅಷ್ಟಕ್ಕೂ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವಷ್ಟು ಧೈರ್ಯ ಭಾರತಕ್ಕಿಲ್ಲ. ನಾವು 20 ಮಿಲಿಯನ್ ಸಿಖ್ಖರು ಪಾಕಿಸ್ತಾನದ ಜೊತೆಗಿದ್ದೇವೆ. ಭಾರತದಲ್ಲಿ ಸಿಖ್ಖರು ಮತ್ತು ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಈಗ ಕಾಲ ಬದಲಾಗಿದೆ. ಇದು 1965 ಅಥವಾ 1971 ಅಲ್ಲ, 2025 ಎಂದು ಪನ್ನು ಎಚ್ಚರಿಕೆ ನೀಡಿದ್ದಾನೆ.
ಪಾಕಿಸ್ತಾನ ಎಂದಿಗೂ ಅವರಾಗಿಯೇ ದಾಳಿ ಮಾಡಲ್ಲ. ಯಾರೇ ಮಾಡಿದರೂ ಅವರಿಗೆ ಕೆಟ್ಟ ಅಂತ್ಯವಿರುತ್ತದೆ. ರಾಜಕೀಯ ಲಾಭಕ್ಕಾಗಿ ಭಾರತವೇ ಪಹಲ್ಗಾಮ್ ನಲ್ಲಿ ಹಿಂದೂಗಳನ್ನು ಕೊಂದಿದೆ ಎಂದು ಪನ್ನು ಆರೋಪಿಸಿದ್ದಾನೆ.