ಚಂಢೀಘಡ: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡವಿದ್ದು, ಇದೀಗ ಪಾಕಿಸ್ತಾನ ಚಂಢೀಘಡಕ್ಕೆ ದಾಳಿ ಮಾಡುವ ಸೂಚನೆ ಸಿಕ್ಕಿದ್ದು ನಗರಕ್ಕೆ ಎಚ್ಚರಿಕೆಯ ಸೈರನ್ ಮೊಳಗಿಸಲಾಗಿದೆ.
ಚಂಢೀಘಡದಲ್ಲಿ ಪೊಲೀಸರು ನಾಗರಿಕರ ಸುರಕ್ಷತೆಗೆ ಘೋಷಣೆಗಳನ್ನು ಮಾಡುತ್ತಿದ್ದಾರೆ. ಮನೆಯೊಳಗೇ ಇರುವಂತೆ ಸೂಚನೆ ನೀಡುತ್ತಿದ್ದಾರೆ. ಒಂದು ವೇಳೆ ಮನೆ ಸಮೀಪದಲ್ಲಿ ಇಲ್ಲದೇ ಇದ್ದರೆ ಹತ್ತಿರ ಕಟ್ಟಡಗಳ ಒಳಗೆ ಇರುವಂತೆ ಸೂಚನೆ ನೀಡುತ್ತಿದ್ದಾರೆ.
ಬಾಲ್ಕನಿಗೆ ಬಾರದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಈಗಾಗಲೇ ನಗರದಲ್ಲಿ ಎಚ್ಚರಿಕೆ ಸೈರನ್ ಮೊಳಗಿಸಲಾಗಿದ್ದು ಪಾಕಿಸ್ತಾನ ಈ ನಗರದ ಮೇಲೆ ದಾಳಿ ನಡೆಸಿದರೆ ಅದನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗಿದೆ.