Jay Shah: ಅಪ್ಪ ನಂಗೂ ಒಂದು ಮಿಸೈಲ್ ಕೊಡು ಎಂದು ರಾವಲ್ಪಿಂಡಿಗೆ ಹೊಡೆದ ಜಯ್ ಶಾ

Krishnaveni K

ಶುಕ್ರವಾರ, 9 ಮೇ 2025 (10:11 IST)
ನವದೆಹಲಿ: ಪಾಕಿಸ್ತಾನದ ರಾವಲ್ಪಿಂಡಿ ಮೇಲೆ ಭಾರತ ದಾಳಿ ಮಾಡಿದೆ ಎಂಬ ಸುದ್ದಿ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಐಸಿಸಿ ಅಧ್ಯಕ್ಷ, ಗೃಹಸಚಿವ ಅಮಿತ್ ಶಾ ಪುತ್ರ ಜಯ್ ಶಾ ವಿಡಿಯೋ ಮಾಡಿ ಟ್ರೋಲ್ ಮಾಡಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಪುತ್ರರೂ ಆಗಿರುವ ಜಯ್ ಶಾ ಐಸಿಸಿಯ ಹಾಲಿ ಅಧ್ಯಕ್ಷ, ಬಿಸಿಸಿಐನ ಮಾಜಿ ಕಾರ್ಯದರ್ಶಿ. ಭಾರತೀಯ ಕ್ರಿಕೆಟ್ ರಂಗದ ಪವರ್ ಫುಲ್ ವ್ಯಕ್ತಿ ಜಯ್ ಶಾ. ಅವರಿಂದಾಗಿಯೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ ಭಾರತ ಆಡುವ ಎಲ್ಲಾ ಪಂದ್ಯಗಳನ್ನೂ ದುಬೈನಲ್ಲಿ ಆಯೋಜಿಸಲಾಗಿತ್ತು.

ಇದೀಗ ರಾವಲ್ಪಿಂಡಿಯಲ್ಲಿ ನಿನ್ನೆ ಭಾರತ ಕ್ಷಿಪಣಿ ದಾಳಿ ಮಾಡಿದ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ರಾವಲ್ಪಿಂಡಿಯಲ್ಲಿ ನಿನ್ನೆ ಪಾಕಿಸ್ತಾನ ಪ್ರೀಮಿಯರ್ ಲೀಗ್ ಪಂದ್ಯ ಆಯೋಜನೆಯಾಗಿತ್ತು. ಆದರೆ ಭಾರತ ದಾಳಿಯಿಂದ ಪಂದ್ಯ ನಡೆಯಲಿಲ್ಲ.

ಇದನ್ನಿಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ತಂದೆ ಅಮಿತ್ ಶಾ ಬಳಿ ಜಯ್ ಶಾ ಒಂದು ಮಿಸೈಲ್ ಕೊಡಿ ಎಂದು ಕೇಳಿ ಇಸ್ಕೊಂಡು ರಾವಲ್ಪಿಂಡಿ ಮೈದಾನಕ್ಕೆ ಬಿಟ್ಟಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

Jay Shah with Drone..???? pic.twitter.com/y0m8XxWKRV

— Jo Kar (@i_am_gustakh) May 8, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ