India Pakistan: ಪಾಕಿಸ್ತಾನಕ್ಕೆ ಇನ್ನೊಂದು ಮರ್ಮಾಘಾತ ನೀಡಲು ಮುಂದಾದ ಭಾರತ
ಉಗ್ರರನ್ನು ಪೋಷಿಸಿ ಭಾರತ ವಿರೋಧಿ ಚಟುವಟಿಕೆಗಳಿಗೆ ರವಾನಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಬುದ್ಧಿ ಕಲಿಸಲು ಭಾರತ ತೀರ್ಮಾನಿಸಿದೆ. ಇದರ ಅನ್ವಯ ಜಾಗತಿಕ ಸಂಸ್ಥೆಗಳಿಂದ ಪಾಕಿಸ್ತಾನಕ್ಕೆ ಸಿಗುತ್ತಿರುವ ಆರ್ಥಿಕ ನೆರವು ಸ್ಥಗಿತಗೊಳಿಸಲು ಭಾರತ ಪ್ಲ್ಯಾನ್ ಮಾಡಿದೆ.
ಸದ್ಯಕ್ಕೆ ಆರ್ಥಿಕವಾಗಿ ಬಿಕಾರಿಯಾಗಿರುವ ಪಾಕಿಸ್ತಾನಕ್ಕೆ ಹಣಕಾಸಿನ ಸಹಾಯ ಸಿಗದಂತೆ ಮಾಡಲು ತೀರ್ಮಾನಿಸಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಾನಿಟರಿ ಫಂಡ್ ಸಂಸ್ಥೆಗೆ ಪಾಕಿಸಸ್ತಾನಕ್ಕೆ ಮುಂದೆ ಹಣಕಾಸಿನ ಸಹಾಯ ಮಾಡದಂತೆ ಮತ್ತು ಈಗಾಗಲೇ ನೀಡಿರುವ ಸಾಲಗಳ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದೆ.
ಐಎಂಎಫ್ ನಿಂದ ಪಾಕಿಸ್ತಾನ ಸಾಕಷ್ಟು ಸಾಲ ಪಡೆದುಕೊಂಡಿದೆ. ಒಂದು ವೇಳೆ ಇದನ್ನು ಮರುಪಾವತಿ ಮಾಡುವಂತೆ ಅಥವಾ ಮುಂದಿನ ದಿನಗಳಲ್ಲಿ ಸಾಲ ಕೊಡದೇ ಹೋದಲ್ಲಿ ಪಾಕಿಸ್ತಾನದ ಸ್ಥಿತಿ ದಯನೀಯವಾಗಲಿದೆ.