India Pakistan: ಪಾಕಿಸ್ತಾನದ ಕ್ರಿಕೆಟಿಗರು ಬಿಡಿ, ಕ್ರಿಕೆಟಿಗ ಇನ್ ಸ್ಟಾಗ್ರಾಂ ಖಾತೆಗೂ ಭಾರತದಲ್ಲಿ ನೋ ಎಂಟ್ರಿ
ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿರುವ ಭಾರತ ಆ ದೇಶದ ಪ್ರಜೆಗಳನ್ನು ಗಡೀಪಾರು ಮಾಡಿದೆ. ಇನ್ನೊಂದೆಡೆ ಪಾಕಿಸ್ತಾನದ ಯೂ ಟ್ಯೂಬ್ ಚಾನೆಲ್ ಗಳು, ಪ್ರಮುಖ ಸೋಷಿಯಲ್ ಮೀಡಿಯಾ ಖಾತೆಗಳನ್ನೂ ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ.
ಇಷ್ಟು ದಿನ ಪಾಕಿಸ್ತಾನ ಕ್ರಿಕೆಟ್ ಭಾರತದಲ್ಲಿ ಕ್ರಿಕೆಟ್ ಸರಣಿ ಆಡುವ ಬಯಕೆ ತೋಡಿಕೊಳ್ಳುತ್ತಿತ್ತು. ಈಗ ಕ್ರಿಕೆಟ್ ಸರಣಿ ಬಿಡಿ, ಆ ದೇಶದ ಕ್ರಿಕೆಟಿಗರ ಇನ್ ಸ್ಟಾಗ್ರಾಂ, ಎಕ್ಸ್ ಸೇರಿದಂತೆ ಯಾವುದೇ ಸೋಷಿಯಲ್ ಮೀಡಿಯಾ ಖಾತೆಗಳಿಗೂ ಇಲ್ಲಿ ಪ್ರವೇಶವಿಲ್ಲದಂತಾಗಿದೆ. ಪಾಕಿಸ್ತಾನ ಕ್ರಿಕೆಟಿಗರಾದ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಸಾಕಷ್ಟು ಫಾಲೋವರ್ ಗಳನ್ನು ಹೊಂದಿದ್ದ ಪಾಕಿಸ್ತಾನ ಕ್ರಿಕೆಟಿಗರ ಇನ್ ಸ್ಟಾಗ್ರಾಂ ಖಾತೆಗಳು ಭಾರತದಲ್ಲಿ ಬ್ಲಾಕ್ ಆಗಿವೆ.