ಅದು ಪಾಕಿಸ್ತಾನವಲ್ಲ, ಟೆರರಿಸ್ತಾನ: ವಿಶ್ವಸಂಸ್ಥೆಯಲ್ಲಿ ಭಾರತದ ಖಡಕ್ ಉತ್ತರ

ಶುಕ್ರವಾರ, 22 ಸೆಪ್ಟಂಬರ್ 2017 (12:16 IST)
ಭಾರತದ ವಿರುದ್ಧ ಕಿರು ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನ ಭೌಗೋಳಿಕವಾಗಿ ಭಯೋತ್ಪಾದನೆಯ ಸಮಾನಾರ್ಥವಾಗಿ ಗುರುತಿಸಿಕೊಂಡಿದೆ. ಅದು ಪಾಕಿಸ್ತಾನವಲ್ಲ, ಟರರಿಸ್ಥಾನ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ  ಭಾರತದ ವಿಶ್ವಸಂಸ್ಥೆಯ ಮೊದಲ ಕಾರ್ಯದರ್ಶಿ ಈನಮ್ ಗಂಭೀರ್ ವಾಗ್ದಳಿ ನಡೆಸಿದ್ಧಾರೆ.
 

`ಪಾಕಿಸ್ತಾನದ ಇತಿಹಾಸ ನೋಡಿದರೆ ಭೌಗೋಳಿಕವಾಗಿ ಉಗ್ರವಾದದ ಸಮಾನಾರ್ಥವಾಗಿ ಗುರುತಿಸಿಕೊಂಡಿರುವುದು ಕಂಡುಬರುತ್ತದೆ. ಶುದ್ಧ ಭಯೋತ್ಪಾದಕರನ್ನ ಉತ್ಪಾದಿಸುತ್ತಿದೆ. ಉದ್ಯಮದ ರೀತಿ ಭಯೋತ್ಪಾದಕರನ್ನ ಉತ್ಪಾದಿಸಿ ಜಗತ್ತಿಗೆ ನೀಡುತ್ತಿದೆ. ಪಾಕಿಸ್ತಾನ ಈಗ ಟೆರಿಸ್ತಾನವಾಗಿದೆ ಈನಮ್ ಗಂಭೀರ್ ಕಿಡಿ ಕಾರಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯ ತೆಗೆದು ಪಾಕಿಸ್ತಾನದ ವಿರುದ್ಧ ಭಾರತ ಭಯೋತ್ಪಾದಕ ಕೃತ್ಯ ನಡೆಸುತ್ತಿದೆ. ಭಾರತದ ವಿರುದ್ಧ ಕಿರು ಅಣ್ವಸ್ತ್ರ ಬಳಸುವುದಾಗಿ ಪಾಕ್ ಪ್ರಧಾನಿ ಶಾಹಿದ್ ಖಕಾನ್ ಅಬ್ಬಾಸಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಸ್ಪಷ್ಟ ತಿರುಗೇಟು ನೀಡಿದೆ.

ಒಸಾಮಾ ಬಿನ್ ಲಾಡೆನ್, ಮುಲ್ಲಾ ಓಮರ್`ರಂತಹ ಭಯೋತ್ಪಾದಕರಿಗೆ ಸುರಕ್ಷಿತ ನೆಲೆ ಒದಗಿಸಿದ್ದ ಪಾಕಿಸ್ತಾನ ಇದೀಗ 26/11 ಮುಂಬೈ ದಾಳಿಯ ಉಗ್ರ ಹಫೀಜ್ ಸಯ್ಯಿದ್`ನನ್ನ ಆರಾಮವಾಗಿ ಓಡಾಡಿಕೊಂಡಿರಲು ಅವಕಾಶ ಕೊಟ್ಟಿದೆ. ಹಫೀಜ್`ನನ್ನ ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆಯೇ ಘೊಷಿಸಿದ್ದರೂ ಪಾಕಿಸ್ತಾನ ನೆಲೆ ಕೊಟ್ಟಿದೆ. ಅಲ್ಲಿನ ರಾಜಕಾರಣಿಗಳು ಮತ್ತು ಮಿಲಿಟರಿ ಜೊತೆ ಆತ ಸಂಬಂಧ ಹೊಂದಿದ್ದಾನೆ ಎಂದು ಭಾರತ ಆರೋಪಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ