ಚೀನಾ ಸೈನಿಕನನ್ನು ಬಂಧಿಸಿದರೂ ಮಾನವೀಯತೆ ಮರೆಯದ ಭಾರತೀಯ ಸೈನಿಕರು

ಮಂಗಳವಾರ, 20 ಅಕ್ಟೋಬರ್ 2020 (09:50 IST)
ನವದೆಹಲಿ: ಗಡಿ ರೇಖೆ ದಾಟಿ ಬಂದ ಚೀನಾ ಸೈನಿಕನೊಬ್ಬನನ್ನು ಭಾರತೀಯ ಸೇನೆ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದೆ. ಆದರೆ ಬಂಧಿಸಿದರೂ ಭಾರತೀಯ ಸೈನಿಕರು ತಮ್ಮ ಮಾನವೀಯತೆ ಮಾತ್ರ ಮರೆತಿಲ್ಲ.


ಲಡಾಖ್ ಗಡಯಲ್ಲಿ ವಾಸ್ತವ ರೇಖೆ ದಾಟಿ ಬಂದ ಚೀನಾ ಸೈನಿಕ ಲಾ ಯಂಗ್ ಎಂಬಾತನಿಂದ ಮಿಲಿಟರಿ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಚೀನಾಗೆ ಸೇನೆಗೆ ಮಾಹಿತಿ ನೀಡಲಾಗಿದೆ. ಮೂಲಗಳ ಪ್ರಕಾರ ಚೀನಾ ಸೇನೆ ಈ ಸೈನಿಕ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗಿದೆ.

ಶತ್ರು ರಾಷ್ಟ್ರದ ಸೈನಿಕನನ್ನು ಬಂಧಿಸಿದರೂ ಭಾರತೀಯ ಯೋಧರು ಮಾನವೀಯತೆ ಮಾತ್ರ ಮರೆತಿಲ್ಲ. ಲಡಾಖ್ ನ ಚಳಿಯಲ್ಲಿ ಶತ್ರು ಸೈನಿಕನ ಆರೋಗ್ಯ ಕಾಪಾಡಿಕೊಳ್ಳಲು ಬೆಚ್ಚನೆಯ ಬಟ್ಟೆ, ಆಹಾರ, ವೈದ್ಯಕೀಯ ಸಹಾಯ ನೀಡಿ ರಕ್ಷಿಸಿದೆ. ಇದು ಭಾರತೀಯ ಸೈನಿಕರ ಉದಾರತೆಗೆ ಸಾಕ್ಷಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ