Indian Army: ಭಾರತೀಯ ಸೇನೆಯ ಬತ್ತಳಿಕೆಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ವಿಶೇಷತೆ ಏನು ನೋಡಿ

Krishnaveni K

ಮಂಗಳವಾರ, 29 ಏಪ್ರಿಲ್ 2025 (08:56 IST)
ನವದೆಹಲಿ: ಒಂದೆಡೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸದೃಶ ವಾತಾವರಣವಿದ್ದರೆ ಇತ್ತ ನೌಕಾ ಸೇನೆ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ನಡೆಸಿ ಎದುರಾಳಿಗಳಿಗೆ ಎಚ್ಚರಿಕೆ ನೀಡಿದೆ. ಅಷ್ಟಕ್ಕೂ ಬ್ರಹ್ಮೋಸ್ ಕ್ಷಿಪಣಿಯ ವಿಶೇಷತೆಯೇನು ನೋಡಿ.

ಸಬ್ ಮೆರೈನ್, ಶಿಪ್, ಫೈಟರ್ ಏರ್ ಕ್ರಾಫ್ಟ್ ನಿಂದ ಲಾಂಚ್ ಮಾಡಬಹುದಾದ ಭಾರತೀಯ ಸೇನೆಯ ಅತ್ಯಂತ ಪ್ರಬಲ ಕ್ಷಿಪಣಿ ಇದಾಗಿದೆ. ಇದನ್ನು ಭಾರತದ ಡಿಆರ್ ಡಿಒ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಂಶೋಧನೆ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿ ಪಡಿಸಿದೆ. ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕೊವಾ ಹೆಸರು ಸೇರಿಸಿ ಬ್ರಹ್ಮೋಸ್ ಎಂದು ಇದಕ್ಕೆ ಹೆಸರಿಡಲಾಗಿದೆ.

2019 ರಿಂದ ಈ ಕ್ಷಿಪಣಿ ಭಾರತೀಯ ಸೇನೆಗೆ ಲಭ್ಯವಾಗಿದೆ. ಈ ಕ್ಷಿಪಣಿಯ ಒಟ್ಟು ಭಾರ 3,000 ಕೆ.ಜಿ. 8.4 ಮೀ. ಉದ್ದ ಹೊಂದಿದೆ. ಬ್ರಹ್ಮೋಸ್ ಕ್ಷಿಪಣಿಗಳು ಕನಿಷ್ಠ 200 ಕೆ.ಜಿ. ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಚಲಿಸುವ ಗುರಿಯನ್ನೂ ನಿಖರವಾಗಿ ಪತ್ತೆ ಮಾಡಿ ಹೊಡೆದುರುಳಿಸುವ ಸಾಮರ್ಥ್ಯವಿದೆ. ಹಲವು ಕಟ್ಟಡಗಳ ನಡುವೆಯೂ ನಿಖರ ಗುರಿಯನ್ನು ಪತ್ತೆ ಮಾಡಿ ದಾಳಿ ಮಾಡುವ ತಾಕತ್ತು ಹೊಂದಿದೆ. 290 ಕಿ.ಮೀ. ವರೆಗಿನ ಹಾರಾಟದ ವ್ಯಾಪ್ತಿ ಇದಕ್ಕಿದ್ದು ಸೂಪರ್ ಸಾನಿಕ್ ವೇಗ ಹೊಂದಿರುತ್ತದೆ. ಪ್ರಸ್ತುತ ಇರುವ ಸಬ್ ಸಾನಿಕ್ ಕ್ರೂಸ್ ಕ್ಷಿಪಣಿಗಳಿಗೆ ಹೋಲಿಸಿದರೆ ಇದು ಅತ್ಯಂತ ವೇಗದ ಕ್ಷಿಪಣಿಯಾಗಿದೆ. 3 ಪಟ್ಟು ಹೆಚ್ಚು ವೇಗ, ಮೂರು ಪಟ್ಟು ಹೆಚ್ಚಿನ ಹಾರಾಟ ವ್ಯಾಪ್ತಿ, 9 ಪಟ್ಟ ಹೆಚ್ಚು ಚಲನ ಶಕ್ತಿ ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ