Indian Navy: ನಾವು ರೆಡಿ ಎಂದು ಕ್ಷಿಪಿಣಿ ಹಾರಿಸಿ ಪಾಕಿಸ್ತಾನಕ್ಕೆ ಠಕ್ಕರ್ ಕೊಟ್ಟ ಭಾರತೀಯ ನೌಕಾ ಸೇನೆ
ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾದಾಗಿನಿಂದ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡವಿದೆ. ಎರಡೂ ದೇಶಗಳೂ ಗಡಿಯಲ್ಲಿ ಸೇನಾ ಜಮಾವಣೆ ಮಾಡಿದೆ. ಯಾವುದೇ ಸಂದರ್ಭವನ್ನೂ ಎದುರಿಸಲು ಸಿದ್ಧರಾಗಿರುವಂತೆ ಸೇನೆಗೆ ಸೂಚನೆ ನೀಡಲಾಗಿದೆ.
ನಿನ್ನೆ ವಾಯುಸೇನೆ ತನ್ನ ಯುದ್ಧ ಸಾಮರ್ಥ್ಯದ ಬಗ್ಗೆ ವಿಡಿಯೋವೊಂದನ್ನು ಪ್ರಕಟಿಸಿ ಪಾಕ್ ಗೆ ಎಚ್ಚರಿಕೆ ಕೊಟ್ಟಿತ್ತು. ಇದೀಗ ನೌಕಾ ಸೇನೆ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಹಾರಿಸಿರುವ ವಿಡಿಯೋ ಪ್ರಕಟಿಸಿ ಎನಿ ಟೈಮ್ ಎನಿ ವೇರ್ ಎಂದು ಸಂದೇಶ ರವಾನಿಸಿದೆ.
ಸಿಂಧೂ ನದಿ ನೀರು ಬಿಡದೇ ಇದ್ದರೆ ಯುದ್ಧ ಮಾಡ್ತೀವಿ ಎಂದು ಪಾಕಿಸ್ತಾನದ ನಾಯಕರು ದಿನಕ್ಕೊಬ್ಬರಂತೆ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಭಾರತೀಯ ಸೇನೆ ತಾವು ಯಾವುದಕ್ಕೂ ರೆಡಿ ಎಂದು ಕೌಂಟರ್ ಕೊಡುತ್ತಿದ್ದಾರೆ.