ಚೀನಾಗೆ ಅವರದ್ದೇ ಭಾಷೆಯಲ್ಲಿ ಪಾಠ ಕಲಿಸಲು ಭಾರತೀಯ ಸೇನೆ ಸಜ್ಜು

ಬುಧವಾರ, 25 ಅಕ್ಟೋಬರ್ 2017 (09:06 IST)
ನವದೆಹಲಿ: ಡೋಕ್ಲಾಂ ಗಡಿ ವಿವಾದದ ನಂತರ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಕಾರ್ಯಕ್ಷಮತೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಸಕಲ ತಯಾರಿ ನಡೆಸುತ್ತಿದ್ದು, ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಮುಂದಾಗಿದೆ.

 
ಈ ಭಾಗದಲ್ಲಿ ಗಡಿ ಕಾಯುವ ಯೋಧರಿಗೆ ಚೀನಾ ಭಾಷೆ ಕಲಿಸಲು ಕೇಂದ್ರ ಮುಂದಾಗಿದೆ. ಅಷ್ಟೇ ಅಲ್ಲದೆ, 20 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶವಿರುವ ಎತ್ತರದ ಪ್ರದೇಶದಲ್ಲಿ ಆಧುನಿಕತ ತಂತ್ರಜ್ಞಾನಗಳಿಗೆ ಹೊಂದಿಕೊಂಡು ಕಾರ್ಯ ನಿರ್ವಹಿಸಬಲ್ಲ 50 ಕ್ಕೂ ಹೆಚ್ಚು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಶಿಬಿರಗಳ ಸ್ಥಾಪನೆಗೆ ಮುಂದಾಗಲಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಈ ಶಿಬಿರಗಳಲ್ಲಿ ಭಾರತೀಯ ಯೋಧರಿಗೆ ಚೀನಾ ಭಾಷೆ ಕಲಿಸಿ ಕೊಡಲಾಗುವುದು. ಚೀನಾ ಯೋಧರೊಂದಿಗೆ ವ್ಯವಹರಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಈ ಭಾಷೆ ಬಳಕೆ ಮಾಡಬಹುದು ಎಂದು ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ