ಸರ್ಜಿಕಲ್ ಸ್ಟ್ರೈಕ್ ನಡೆದಾಗ ಸೈನಿಕರ ಸ್ಥಿತಿ ಹೇಗಿತ್ತು? ಮೇಜರ್ ಹೇಳಿದ್ದೇನು?

ಸೋಮವಾರ, 11 ಸೆಪ್ಟಂಬರ್ 2017 (09:23 IST)
ನವದೆಹಲಿ: ಪಾಕ್ ಆಕ್ರಮಿತ  ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕರನ್ನು ಸದೆಬಡಿದ ನಮ್ಮ ವೀರ ಯೋಧರ ಸರ್ಜಿಕಲ್ ಸ್ಟ್ರೈಕ್ ಗೆ ಇದೀಗ ಒಂದು ವರ್ಷ. ಆಗ ಏನೇನು ನಡೆದಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು.

 
ಆದರೆ ಸೇನೆ ಏನನ್ನೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ಮೇಜರ್ ಮೈಕ್ ಟಾಂಗೋ ಆಗ ಏನೆಲ್ಲಾ ನಡೆದಿತ್ತು ಎನ್ನುವುದನ್ನು ತಮ್ಮ ಹೊಸ ಪುಸ್ತಕವೊಂದರಲ್ಲಿ ವಿವರಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಡೆಸಿ ಸೈನಿಕರು ಮರಳಿ ಗಡಿಯೊಳಗೆ ಬಂದಿದ್ದು ಅತೀ ಹೆಚ್ಚು ಸವಾಲಿನ ಕೆಲಸವಾಗಿತ್ತು ಎಂದು ಅವರು ಸ್ಮರಿಸಿಕೊಂಡಿದ್ದಾರೆ.

ಉರಿ ದಾಳಿಯಲ್ಲಿ ಸಂಕಷ್ಟಕ್ಕೀಡಾಗಿ ಸೇಡಿನ ಕಿಚ್ಚು ಹೊತ್ತಿದ್ದ ಸೈನಿಕರನ್ನೇ ಸರ್ಜಿಕಲ್ ಸ್ಟ್ರೈಕ್ ಗೆ ಆರಿಸಿಕೊಂಡಿತ್ತು.ಒಟ್ಟು 19 ಸೈನಿಕರ ತಂಡ ಸಿದ್ಧವಾಗಿತ್ತು. ಆದರೆ ಅವರನ್ನು ಕಳುಹಿಸುವ ಮೊದಲು ಅವರು ಜೀವಂತವಾಗಿ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಮನಸ್ಸಲ್ಲಿತ್ತು.

ಆದರೆ ಅಲ್ಲಿ ದಾಳಿ ನಡೆಸುವುದು ಯೋಧರಿಗೆ ಕಷ್ಟವಾಗಲಿಲ್ಲ. ಆದರೆ ವಾಪಸ್ ಬರುವುದು ಸವಾಲಾಗಿತ್ತು. ವಾಪಸ್ ಬರುವಾಗ ಪಾಕ್ ಯೋಧರಿಂದ ಗುಂಡಿನ ದಾಳಿಯಾಗುತ್ತಿತ್ತು. ಆದರೆ ಬರುವ ಮೊದಲು 38 ರಿಂದ 40 ಉಗ್ರರನ್ನು ಮತ್ತು ಎರಡು ಪಾಕ್ ಯೋಧರನ್ನು ಕೊಂದು ಬಂದಿದ್ದೆವು.

ಬರುವಾಗ ಹೆಚ್ಚು ತೆವಳಿಕೊಂಡೇ ಬರಬೇಕಾಗಿತ್ತು. ಮರದ ಎಲೆಗಳನ್ನು ಮೈಮೇಲೆ ಹಾಕಿಕೊಂಡು ಬರಬೇಕಾಯ್ತು. ಕಿವಿ ಹತ್ತಿರದಲ್ಲೇ ಗುಂಡು ಬೀಳುತ್ತಿತ್ತು. ಕೊನೆಗೂ ಸೂರ್ಯ ಮೇಲೇರುವ ಹೊತ್ತಿಗೆ ಭಾರತದ ಗಡಿಯೊಳಕ್ಕೆ ಬಂದಿದ್ದೆವು ಎಂದು ಮೇಜರ್ ಆ ದಿನವನ್ನು ವಿವರಿಸಿದ್ದಾರೆ.

ಇದನ್ನೂ ಓದಿ.. ಡೇರಾ ಬಾಬಾನ ದತ್ತು ಪುತ್ರಿ ಎಲ್ಲಿ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ