Indus Water treaty: ಸಿಂಧೂ ನದಿ ನೀರು ಬಿಡಿ ಎಂದ ಪಾಕಿಸ್ತಾನಕ್ಕೆ ಭಾರತ ಕೊಟ್ಟ ಉತ್ತರವೇನು ಗೊತ್ತಾ

Krishnaveni K

ಶನಿವಾರ, 17 ಮೇ 2025 (09:36 IST)
ನವದೆಹಲಿ: ಸಿಂಧೂ ನದಿ ನೀರು ಬಿಡಿ ಎಂದು ಅಂಗಲಾಚುತ್ತಿರುವ ಪಾಕಿಸ್ತಾನಕ್ಕೆ ಭಾರತ ಖಡಕ್ ಉತ್ತರ ಕೊಟ್ಟಿದೆ. ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದುಪಡಿಸಿತ್ತು.

ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಕದನವಿರಾಮ ಏರ್ಪಟ್ಟಿದೆ. ಹಾಗಿದ್ದರೂ ಸಿಂಧೂ ನದಿ ನೀರು ಹಂಚಿಕೆ ಮಾಡಲು ಭಾರತ ಒಪ್ಪಿಲ್ಲ. ಇದರಿಂದಾಗಿ ಪಾಕಿಸ್ತಾನದಲ್ಲಿ ನೀರಿಗಾಗಿ ಹಾಹಾಕಾರವೇರ್ಪಟ್ಟಿದೆ.

ಪಾಕಿಸ್ತಾನದ ನೀರಿನ ಶೇ.80 ರಷ್ಟು ಅಗತ್ಯಗಳನ್ನು ಸಿಂಧೂ ನದಿ ಪೂರೈಸುತ್ತಿತ್ತು. ಕೃಷಿ, ಕೃಷಿಯೇತರ ಚಟುವಟಿಕೆಗಳಿಗೆ ಪಾಕಿಸ್ತಾನ ಸಿಂಧೂ ನದಿ ನೀರನ್ನು ಅವಲಂಬಿಸಿತ್ತು. ಆದರೆ ಈಗ ಭಾರತ ನೀರು ಬಿಡದೇ ಇರಲು ತೀರ್ಮಾನಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿದೆ.

ನೀರು ಬಿಡಿ ಎನ್ನುತ್ತಿರುವ ಪಾಕಿಸ್ತಾನಕ್ಕೆ ಎಲ್ಲಿಯವರೆಗೆ ಭಯೋತ್ಪಾದಕರನ್ನು ಛೂ ಬಿಡುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಉತ್ತರ ಕೊಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ