ಬೆಳಗಾವಿ: ಕುರಾನ್ ಗ್ರಂಥ ಸುಟ್ಟು ಹಾಕಿದ ಹಿನ್ನೆಲೆ ವಿವಿಧ ಮುಸ್ಲಿಂ ಸಂಘಟನೆಗಳು ಹಾಗೂ ಮಸೀದಿಗಳಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಕೋರ್ಟ್ ಆವರಣ ಪಕ್ಕದಲ್ಲಿರುವ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಸೇರಿದ ಅಪಾರ ಸಂಖ್ಯೆಯ ಜನ, ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು.
ನಾರಾ ತಕ್ದೀರ್, ಅಲ್ಲಾಹು ಅಕ್ಬರ್, ಹಿಂದೂಸ್ತಾನ್ ಜಿಂದಾಬಾದ್ ಎಂದು ನಿರಂತರ ಘೋಷಣೆ ಮೊಳಗಿಸಿದರು. ಮುಸ್ಲಿಂ ಧರ್ಮದ ಧ್ವಜಗಳನ್ನು ಎಲ್ಲೆಡೆ ಹಾರಾಡಿಸಿದರು. ಈ ವೇಳೆ ಕುರಾನ್ ಅನ್ನು ಸುಟ್ಟು ಹಾಕಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡಿದರು.
ತಾಲ್ಲೂಕಿನಲ್ಲಿ ಸಂತಿಬಸ್ತವಾಡ ಗ್ರಾಮದಲ್ಲಿ ಈಚೆಗೆ ಕುರಾನ್ ಗ್ರಂಥವನ್ನು ಸುಟ್ಟುಹಾಕಲಾಗಿತ್ತು. ಚನ್ನಮ್ಮ ವೃತ್ತದ ನಾಲ್ಕೂ ದಿಕ್ಕಿನಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ.
ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಬೆಂಬಲ ಸೂಚಿಸಿದರು. ಮಧ್ಯಾಹ್ನದ ನಮಾಜ್ ಮುಗಿಸಿದ ಬಳಿಕ ಮಸೀದಿ, ದರ್ಗಾಗಳಿಂದಲೇ ಜನ ನೇರವಾಗಿ ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಸೇರಿದರು.
PCB ಯೊಂದಿಗೆ ಸಮನ್ವಯದಲ್ಲಿ ಪರಿಷ್ಕೃತ ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ BCB ಅಧಿಕೃತ ಹೇಳಿಕೆಯನ್ನು ನೀಡುವ ನಿರೀಕ್ಷೆಯಿದೆ. ಅಲ್ಲಿಯವರೆಗೆ, ಬಾಂಗ್ಲಾದೇಶದ ತಕ್ಷಣದ ಗಮನವು ಅವರ ಸಣ್ಣ ಯುಎಇ ಪ್ರವಾಸದ ಮೇಲೆ ಉಳಿದಿದೆ ಏಕೆಂದರೆ ಅವರು ಪಾಕಿಸ್ತಾನದಲ್ಲಿ ಸಂಭಾವ್ಯವಾಗಿ ಮರುಹೊಂದಿಸಲಾದ ವೇಳಾಪಟ್ಟಿಗಾಗಿ ಸಜ್ಜಾಗುತ್ತಾರೆ.