ಅಂತರಾಷ್ಟ್ರೀಯ ಕಾಳ ಸಂತೆಯಲ್ಲಿ ಈ ಹಲ್ಲಿಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?

ಸೋಮವಾರ, 22 ಏಪ್ರಿಲ್ 2019 (05:06 IST)
ಏಷ್ಯಾ: ಅಂತರಾಷ್ಟ್ರೀಯ ಕಾಳ ಸಂತೆಯಲ್ಲಿ ಗೀಕೋ ಎನ್ನುವ ಹಲ್ಲಿಯೊಂದಕ್ಕೆ ಬರೋಬ್ಬರಿ 40 ಲಕ್ಷ ರೂ ಕೊಟ್ಟು ಖರೀದಿಸುತ್ತಾರಂತೆ. ಹಾಗಾದ್ರೆ ಈ ಹಲ್ಲಿಯಲ್ಲಿ ಅಂತಹ ವಿಶೇಷತೆ ಏನಿದೆ? ಎಂಬ ಕುತೂಹಲ ಹಲವರಲ್ಲಿ ಮೂಡಿರಬಹುದು. ಇದಕ್ಕೆ ಕಾರಣ ಇಲ್ಲಿದೆ ನೋಡಿ.


ಹೌದು. ಗೀಕೋ ಎನ್ನುವ ಈ ಹಲ್ಲಿ ಹಲವಾರು ಚಿಕಿತ್ಸೆಗಳಿಗೆ ಉಪಯೋಗವಾಗುತ್ತದೆಯಂತೆ. ಈ ಹಲ್ಲಿಯ ಮಾಂಸದಿಂದ ಅನೇಕ ರೀತಿಯ ಮೆಡಿಸಿನ್ ಗಳನ್ನು ತಯಾರಿಸಲಾಗುತ್ತದೆಯಂತೆ. ದಕ್ಷಿಣ ಏಷ್ಯಾದಲ್ಲಿ ಗೀಕೋ ಹಲ್ಲಿಯನ್ನು ನಪುಂಸಕತೆ, ಏಡ್ಸ್ ಮತ್ತು ಕ್ಯಾನ್ಸರ್ ರೋಗಗಳ ಶಮನಗೊಳಿಸಲು ಉಪಯೋಗಿಸುತ್ತಾರಂತೆ. ಚೀನಾದಲ್ಲಿಯೂ  ಕೂಡ ಗೀಕೋವನ್ನು ಔಷಧಿಗಳಲ್ಲಿ ಬಳಸುತ್ತಾರಂತೆ.


ಈ ಅಪರೂಪದ ಹಲ್ಲಿ, ದಕ್ಷಿಣ ಏಷ್ಯಾ, ಬಿಹಾರ, ಇಂಡೋನೇಷಿಯಾ, ಬಾಂಗ್ಲಾದೇಶ, ಫಿಲಿಫೈನ್ಸ್ ಮತ್ತು ನೇಪಾಳದಲ್ಲಿ ದೊರೆಯುತ್ತದೆ. ಮರಗಳ ಮಾರಣಹೋಮ ಮತ್ತು ಔಷಧಿಗಳ ಬಳಕೆಗಾಗಿ ಈ ಹಲ್ಲಿಯ ಬೇಟೆ ನಿರಂತರವಾಗಿ ನಡೆದ ಕಾರಣ ಗೀಕೋಗಳ ಸಂತತಿ ಅಳಿವಿನಂಚಿನಲ್ಲಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ