ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿರುವ ಅಲಸ್ಟೇರ್ ಕುಕ್..

ಮಂಗಳವಾರ, 4 ಸೆಪ್ಟಂಬರ್ 2018 (13:31 IST)
ಅಲಸ್ಟೇರ್ ಕುಕ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಹೇಳುವುದಾಗಿ ಪ್ರಕಟಿಸಿದ್ದು, ಭಾರತ ಹಾಗೂ ಇಂಗ್ಲೆಂಡ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಸರಣಿಯ 5 ನೇ ಪಂದ್ಯವು ಕೊನೆಯ ಪಂದ್ಯವಾಗಲಿದೆ ಎಂದು ತಿಳಿಸಿದ್ದಾರೆ. ತಮ್ಮ ವಿದಾಯದ ಕುರಿತು ಹೇಳುತ್ತಾ 'ಟ್ಯಾಕ್‌ನಲ್ಲಿ ಏನೂ ಉಳಿದಿಲ್ಲ' ಎಂದು ಹೇಳಿದ್ದಾರೆ.
ಸೋಮವಾರದಂದು ಕುಕ್ ತಮ್ಮ ರಿಟೈರ್‌ಮೆಂಟ್ ಅನ್ನು ಘೋಷಿಸಿದ್ದು ಭಾರತದ ವಿರುದ್ಧದ 5 ನೇ ಟೆಸ್ಟ್ ಪಂದ್ಯವು ಅವರ ವಿದಾಯದ ಪಂದ್ಯವಾಗಿರಲಿದೆ. ಇವರು ಇಂಗ್ಲೆಂಡ್ ಕ್ರಿಕೆಟ್‌ನ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ಇವರು ಇದುವರೆಗೆ 12,254 ರನ್‌ಗಳನ್ನು ಗಳಿಸಿದ್ದು, 160 ಪಂದ್ಯಗಳಲ್ಲಿ 32 ಶತಕಗಳನ್ನು ತಮ್ಮ ತೆಕ್ಕೆಗೆ ಎಳೆದುಕೊಂಡಿದ್ದಾರೆ. ಪ್ರಪಂಚದಾದ್ಯಂತ ಅತ್ಯಧಿಕ ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ಕುಕ್ 6 ನೇ ಸ್ಥಾನದಲ್ಲಿದ್ದಾರೆ. ಆರಂಭಿಕ ಎಡಗೈ ಬ್ಯಾಟ್ಸ್‌ಮ್ಯಾನ್ ಆಗಿರುವ ಇವರು 11,627 ರನ್‌ಗಳನ್ನು ಆರಂಭಿಕ ಆಟಗಾರನಾಗಿಯೇ ದಾಖಲಿಸಿರುವುದು ವಿಶೇಷವಾಗಿದೆ.
 
ಆದಾಗ್ಯೂ, ಈ ವರ್ಷದಲ್ಲಿ 16 ಇನ್ನಿಂಗ್‌ಗಳಲ್ಲಿ 18.62 ರ ಸರಾಸರಿಯನ್ನು ಮಾತ್ರ ಹೊಂದಲು ಕುಕ್ ಶಕ್ತರಾಗಿದ್ದಾರೆ. ಭಾರತದ ವಿರುದ್ಧ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 4 ಪಂದ್ಯಗಳಿಂದ ಒಂದು ಅರ್ಧ ಶತಕವನ್ನು ಗಳಿಸುವಲ್ಲಿ ಕುಕ್ ವಿಫಲರಾಗಿದ್ದಾರೆ. ಇಂಗ್ಲೆಂಡ್ ಸರಣಿಯನ್ನು 3-1 ರಲ್ಲಿ ಈಗಾಗಲೇ ತನ್ನ ವಶವಾಗಿಸಿಕೊಂಡಿದ್ದು 5 ನೇ ಟೆಸ್ಟ್ ಪಂದ್ಯ ಶುಕ್ರವಾರ ಓವಲ್‌ನಲ್ಲಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ