ಜನರ ಸಹಾಯಕ್ಕೆ ನಿಂತ ಇಸ್ಕಾನ್

ಸೋಮವಾರ, 28 ಫೆಬ್ರವರಿ 2022 (11:42 IST)
ಕೀವ್ : ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿದೆ. ಈ ಮಧ್ಯೆ ಇಸ್ಕಾನ್ ದೇವಸ್ಥಾನವು ಅಗ್ಯವಿರುವ ಜನರಿಗೆ ದೇವಾಲಯದ ದ್ವಾರಗಳನ್ನು ತೆರೆದಿದೆ.

ಉಕ್ರೇನ್ನಾದ್ಯಂತ ಇರುವ ಇಸ್ಕಾನ್ ದೇವಾಲಯಗಳು ಉಕ್ರೇನ್ ಜನರಿಗೆ ಸೇವೆ ಸಲ್ಲಿಸುತ್ತಿದೆ. ಅವರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸದ್ಯ ಇದರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

ಈ ಬಗ್ಗೆ ಕೊಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ರಾಧಾರಾಮನ್ ದಾಸ್ ಮಾತನಾಡಿ, ಇಸ್ಕಾನ್ನ ಭಕ್ತರು ಹಾಗೂ ದೇವಾಲಯ ಸಮಿತಿಯೂ ಸಂಕಷ್ಟದಲ್ಲಿರುವವರಿಗೆ ಸೇವೆ ಸಲ್ಲಿಸಲು ಬದ್ಧವಾಗಿದೆ. ಕಷ್ಟದಲ್ಲಿರುವವರ ಸೇವೆಗಾಗಿ ನಮ್ಮ ದೇವಾಲಯದ ಬಾಗಿಲು ತೆರೆದಿದೆ ಎಂದು ತಿಳಿಸಿದರು.

ಉಕ್ರೇನ್ನಲ್ಲಿ ಇಸ್ಕಾನ್ 54 ಕ್ಕೂ ಅಧಿಕ ದೇವಾಲಯಗಳನ್ನು ಹೊಂದಿದೆ. ಕಷ್ಟದಲ್ಲಿರುವವರಿಗೆ ಯಾವುದೇ ರೀತಿಯಲ್ಲಿಯಾದರೂ ಸೇವೆ ಸಲ್ಲಿಸಲು ನಾವು ಪ್ರಯತ್ನಿಸುತ್ತೇವೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ