ಇಸ್ರೇಲ್ ಪ್ರಧಾನಿಗೆ ಪುಟಿನ್ ಕ್ಷಮೆ?

ಶುಕ್ರವಾರ, 6 ಮೇ 2022 (13:03 IST)
ಮಾಸ್ಕೋ : ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೋನ ವಿವಾದಿತ ಹೇಳಿಕೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ಗೆ ಕ್ಷಮೆ ಕೋರಿದ್ದಾರೆ.
 
ನಫ್ತಾಲಿ ಬೆನೆಟ್ ಉಕ್ರೇನ್ ಮೇಲಿನ ತಮ್ಮ ಕಾರ್ಯಾಚರಣೆ ಕುರಿತು ವಿವರಿಸುವ ಸಂದರ್ಭ ಹಿಟ್ಲರ್ ಯಹೂದಿ ಪರಂಪರೆಯನ್ನು ಹೊಂದಿದ್ದ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಂಬಂಧ ಹದಗೆಡಬಾರದೆಂದು ಪುಟಿನ್ ಕ್ಷಮೆಯಾಚಿಸಿದ್ದಾರೆ. 

ಇಸ್ರೇಲ್ ತನ್ನ 74ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆನೆಟ್ ಹಾಗೂ ಪುಟಿನ್ ನಡುವೆ ಮಾತುಕತೆ ನಡೆದಿದ್ದು, ಈ ವೇಳೆ ಪುಟಿನ್ ಕ್ಷಮೆ ಕೋರಿದ್ದಾರೆ. ರಷ್ಯಾ ಹಾಗೂ ಇಸ್ರೇಲ್ ಉತ್ತಮ ಸಂಬಂಧ ಹೊಂದಿದ್ದು, ಬೆನೆಟ್ ಮಾಸ್ಕೋ ಪ್ರವಾಸದಲ್ಲಿ ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ