ಪ್ಯಾಲೆಸ್ತೀನ್ ಜೊತೆಗಿನ ಸಂಘರ್ಷದ ನಡುವೆಯೂ ಭಾರತಕ್ಕೆ ನೆರವು ನೀಡುತ್ತಿರುವ ಇಸ್ರೇಲ್
ಆಕ್ಸಿಜನ್ ಸಿಲಿಂಡರ್, ಔಷಧ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಹೊತ್ತ ವಿಶೇಷ ವಿಮಾನ ದೆಹಲಿಗೆ ಬಂದಿಳಿದಿದೆ. ತಮ್ಮಲ್ಲೇ ಸಂಕಷ್ಟವಿದ್ದರೂ ಮಿತ್ರರಾಷ್ಟ್ರಕ್ಕೆ ಸಹಾಯ ಮಾಡಲು ಇಸ್ರೇಲ್ ಹಿಂದೇಟು ಹಾಕಿಲ್ಲ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೋನ್ ಮಲ್ಕಾ ಟ್ವೀಟ್ ಮಾಡಿದ್ದಾರೆ.