ಕೇಂದ್ರದಿಂದ ರಾಜ್ಯಕ್ಕೆ 4 ಲಕ್ಷ ರೆಮಿಡಿಸಿವರ್ ಇಂಜಕ್ಷನ್

ಸೋಮವಾರ, 17 ಮೇ 2021 (09:06 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರೋಗಿಗಳಿಗೆ ಅಗತ್ಯವಾದ ರೆಮಿಡಿಸಿವರ್ ಇಂಜಕ್ಷನ್ ಬರ ನೀಗಲಿದ್ದು, ಕೇಂದ್ರದಿಂದ 4.25 ಲಕ್ಷ ಇಂಜಕ್ಷನ್ ಬಂದಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.


ಮೇ 23 ಕ್ಕೆ ಆಗುವಷ್ಟು ಇಂಜಕ್ಷನ್ ಈಗ ಬಂದು ತಲುಪಿದೆ. ಎಲ್ಲರಿಗಿಂತ ಹೆಚ್ಚು ನಮ್ಮ ರಾಜ್ಯಕ್ಕೇ ಹೆಚ್ಚು ರೆಮಿಡಿಸಿವರ್ ಇಂಜಕ್ಷನ್ ಹಂಚಿಕೆಯಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ಖುದ್ದು ಕೇಂದ್ರ ಸಚಿವ ಸದಾನಂದ ಗೌಡರೇ ಈ ಮಾಹಿತಿ ನೀಡಿದ್ದಾರಂತೆ. ಸದ್ಯಕ್ಕೆ ಕರ್ನಾಟಕದಲ್ಲೇ ಅತೀ ಹೆಚ್ಚು ಪ್ರಕರಣಗಳಿದ್ದು, ಆಕ್ಸಿಜನ್, ರೆಮಿಡಿಸಿವರ್ ಇಂಜಕ್ಷನ್ ಗೆ ಬೇಡಿಕೆಯೂ ಹೆಚ್ಚಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ