ವಾಷಿಂಗ್ಟನ್ : ರಷ್ಯಾಕ್ಕೆ ವಾಯುಮಾರ್ಗವನ್ನು ಮುಚ್ಚಿದ ಅಮೆರಿಕ, ಪುಟಿನ್ ಅವರ ಕ್ರಮಗಳು ಪೂರ್ವಯೋಜಿತವಾಗಿದ್ದು, ಅಪ್ರಚೋದಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿಕಾರಿದರು.
ಮಾಧ್ಯಮಗಳ ಜೊತೆ ಮಾತನಾಡುತ್ತಾ ಉಕ್ರೇನ್ನ ಮೇಲೆ ಕೈಗೊಂಡ ಪುಟಿನ್ನ ಕ್ರಮಗಳನ್ನು ಖಂಡಿಸಿದರು. ಪುಟಿನ್ ಪಶ್ಚಿಮ ಹಾಗೂ ನ್ಯಾಟೋ ಒಕ್ಕೂಟಗಳು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದುಕೊಂಡಿದ್ದರು. ಆದರೆ ಅವರು ಅಂದುಕೊಂಡಿರುವುದು ತಪ್ಪು. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ತಿಳಿಸಿದರು.
ಪುಟಿನ್ ಯುದ್ಧಭೂಮಿಯಲ್ಲಿ ಲಾಭವನ್ನು ಗಳಿಸಬಹುದು. ಆದರೆ ಭವಿಷ್ಯದಲ್ಲಿ ಅವರು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ತಮ್ಮ ದೇಶವು ಯುಎಸ್ ಮಿತ್ರರಾಷ್ಟ್ರಗಳೊಂದಿಗೆ ನ್ಯಾಟೋ ಪ್ರದೇಶಗಳನ್ನು ರಕ್ಷಿಸುತ್ತದೆ. ಅಮೆರಿಕ ಹಾಗೂ ನಮ್ಮ ಮಿತ್ರ ರಾಷ್ಟ್ರಗಳು ಒಗ್ಗಟ್ಟಿನ ಬಲದಿಂದ ನ್ಯಾಟೋ ಪ್ರದೇಶದ ಪ್ರತೀ ಇಂಚನ್ನು ರಕ್ಷಿಸುತ್ತಿದೆ. ಉಕ್ರೇನ್ನವರು ಧೈರ್ಯದಿಂದ ಹೋರಾಡುತ್ತಿದ್ದಾರೆ ಎಂದರು.