ಅಂತರರಾಷ್ಟ್ರೀಯ ಪ್ರವಾಸಕ್ಕೆ ಟಾಯ್ಲೆಟ್ ತೆಗೆದುಕೊಂಡು ಹೋದ ಕಿಮ್ ಜಾಂಗ್ ಉನ್. ಕಾರಣವೇನು ಗೊತ್ತಾ?

ಗುರುವಾರ, 14 ಜೂನ್ 2018 (06:53 IST)
ಉತ್ತರ ಕೊರಿಯಾ :  ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಸಿಂಗಾಪುರಕ್ಕೆ ತೆರಳಿದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ವಿಮಾನದಲ್ಲಿ ಪೋರ್ಟಬಲ್ ಸಂಡಾಸು (ಟಾಯ್ಲೆಟ್) ಕೂಡ ತೆಗೆದುಕೊಂಡು ಹೋಗಿದ್ದಾರಂತೆ.


ತನ್ನ ತಂದೆಯಿಂದ ಏಳು ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡ ನಂತರ, ಮತ್ತು ಮೂವತ್ತೆರಡು ವರ್ಷಗಳಲ್ಲಿ ಕಿಮ್ ಜಾಂಗ್ ಉನ್ ಅವರ ಮೊದಲ ಅಂತರರಾಷ್ಟ್ರೀಯ ಪ್ರವಾಸ ಇದಾಗಿದೆ. ಹಾಗೇ ಅವರಿಗೆ ಚೀನಾವೊಂದನ್ನು ಬಿಟ್ಟು ಉಳಿದ ಯಾವ ದೇಶದ ಮೇಲೆ ನಂಬಿಕೆ ಇರದ ಕಾರಣ ತಾವು ಪ್ರಯಾಣಿಸುವ ಐಎಲ್- 76 ವಿಮಾನದಲ್ಲಿ ತನ್ನ ಆಹಾರ, ಬುಲೆಟ್ ಪ್ರೂಫ್ ಲಿಮೋಸಿನ್ ಜೊತೆಗೆ ಪೋರ್ಟಬಲ್ ಸಂಡಾಸು (ಟಾಯ್ಲೆಟ್) ತೆಗೆದುಕೊಂಡು ಹೋಗಿದ್ದಾರೆ.


ಇದಕ್ಕೆ ಕಾರಣವೆನೆಂದರೆ (ಮಲ-ಮೂತ್ರಗಳ ಪರೀಕ್ಷೆ) ಕಿಮ್ ನ ಆರೋಗ್ಯದ ಸಮಸ್ಯೆಗಳೇನಾದರೂ ಇದ್ದಲ್ಲಿ ಅದನ್ನು ತಿಳಿದುಕೊಂಡು,ಬಹಿರಂಗ ಮಾಡಿ, ಉತ್ತರ ಕೊರಿಯಾದಲ್ಲಿ ಅಸ್ಥಿರ ಸನ್ನಿವೇಶ ಸೃಷ್ಟಿಸಬಹುದು ಎಂಬ ಆತಂಕದ ಕಾರಣಕ್ಕೆ ಹೀಗೆ ಮಾಡುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ