ನಿಷೇಧದ ಬಳಿಕ ಚೀನಾದಿಂದಲೇ ಹೊರಬರಲು ನಿರ್ಧರಿಸಿದ ಟಿಕ್ ಟಾಕ್ ಸಂಸ್ಥೆ!
ಇದೀಗ ಅಮೆರಿಕಾದಲ್ಲಿ ಟಿಕ್ ಟಾಕ್ ನಿಷೇಧ ಮಾಡಿದರೆ ಕಂಪನಿ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ. ಹೀಗಾಗಿ ಟಿಕ್ ಟಾಕ್ ನ ಮಾತೃ ಸಂಸ್ಥೆ ಬೈಟ್ ಡ್ಯಾನ್ಸ್ ಚೀನಾದಿಂದ ಹೊರಬಂದು ಬೇರೆ ರಾಷ್ಟ್ರದಲ್ಲಿ ತನ್ನ ಮುಖ್ಯ ಕಚೇರಿ ತೆರೆದು ತಾನು ಚೀನಾದಿಂದ ಪ್ರತ್ಯೇಕವಾಗಿರುವುದಾಗಿ ಸಂದೇಶ ನೀಡಲು ತೀರ್ಮಾನಿಸಿದೆ. ಹೀಗಾದರೂ ಜಾಗತಿಕ ಮಟ್ಟದಲ್ಲಿ ತನ್ನ ಮೇಲೆ ಹಲವು ರಾಷ್ಟ್ರಗಳು ನಿರ್ಬಂಧ ವಿಧಿಸಲು ತೀರ್ಮಾನಿಸುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದೆ.