ಚೀನಾ ನಂಬದ ಭಾರತ: ರಾತ್ರಿಯೂ ಗಡಿಯಲ್ಲಿ ಗಸ್ತು

ಬುಧವಾರ, 8 ಜುಲೈ 2020 (09:42 IST)
ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವರ ನಡುವಿನ ಮಾತುಕತೆ ಬಳಿಕ ಗಲ್ವಾನ್ ವ್ಯಾಲಿಯಿಂದ ಸೇನೆ ಹಿಂದಕ್ಕೆ ಸರಿಸುವುದಾಗಿ ಚೀನಾ ಒಪ್ಪಿಕೊಂಡ ಮೇಲೂ ಭಾರತ ಗಡಿಯಲ್ಲಿ ಕಟ್ಟೆಚ್ಚರ ಮುಂದುವರಿಸಿದೆ.


ಹಿಂದಿನ ಘಟನೆಗಳಿಂದ ಪಾಠ ಕಲಿತಿರುವ ಭಾರತ ಚೀನಾವನ್ನು ನಂಬುವ ಸ್ಥಿತಿಯಲ್ಲಿಲ್ಲ. ಹೀಗಾಗಿ ರಾತ್ರಿಯೂ ಭಾರತೀಯ ವಾಯುಪಡೆ ವಿಮಾನಗಳು ಪ್ರಮುಖ ಗಡಿ ಭಾಗಗಳಲ್ಲಿ ಹಾರಾಟ ನಡೆಸುತ್ತಿವೆ. ಯಾವುದೇ ಸ್ಥಿತಿಯಲ್ಲೂ ಕಾರ್ಯಾಚರಣೆ ನಡೆಸಬಲ್ಲ ಅಪ್ಯಾಚೆ ಅಟ್ಯಾಕ್ ಹೆಲಿಕಾಪ್ಟರ್ ಗಳು ರಾತ್ರಿ ಕಾರ್ಯಾಚರಣೆ ನಡೆಸಿವೆ.

ಪ್ರಧಾನಿ ಮೋದಿ ಭೇಟಿ ಬಳಿಕ ಗಡಿಯಲ್ಲಿ ಸೇನಾ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಂಡಿದೆ. ಅತ್ತ ಚೀನಾವೂ ಡೆಪ್ಸಾಂಗ್, ಪ್ಯಾಂಗಾಂಗ್ ನಲ್ಲಿ ಸೇನೆ ಹಿಂದಕ್ಕೆ ಸರಿಸಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ