ಐಸಿಜೆ ತೀರ್ಪು ಬರುವವರೆಗೂ ಕುಲಭೂಷಣ್ ಜಾದವ್ ಗೆ ಜೀವದಾನ

ಸೋಮವಾರ, 22 ಮೇ 2017 (14:15 IST)
ಇಸ್ಲಾಮಾಬಾದ್: ಐಸಿಜೆ ಅಂತಿಮ ತೀರ್ಪು ಬರುವವರೆಗೂ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದಿಲ್ಲ ಎಂದು ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಸುಳಿವು ನೀಡಿದ್ದಾರೆ.

 
ಅಂತಾರಾಷ್ಟ್ರೀಯ ನ್ಯಾಯಾಲಯ ಐಸಿಜೆ ಅಂತಿಮ ತೀರ್ಪು ಬಂದ ನಂತರವೇ ದೇಶದ ಕಾನೂನು ಪಾಲನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಅಂದರೆ ಅಲ್ಲಿಯವರೆಗೆ ಗಲ್ಲು ಶಿಕ್ಷೆಗೆ ತಡೆಯಾಗಲಿದೆ ಎಂದಾಗಿದೆ.

ಐಸಿಜೆ ಕೂಡಾ ತನ್ನ ತೀರ್ಪು ಬರುವವರೆಗೂ ಕಾಯಲು ಪಾಕ್ ಗೆ ಸೂಚಿಸಿತ್ತು. ಅದರಂತೆ ಕುಲಭೂಷಣ್ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. ಇದೊಂದೇ ಕಾರಣಕ್ಕೆ ನಾವು ಗಲ್ಲು ಶಿಕ್ಷೆಯನ್ನು ತಡೆ ಹಿಡಿದಿದ್ದೇವೆ ಎಂದು ಪಾಕ್ ವಿದೇಶಾಂಗ ಇಲಾಖೆ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ