ಪಾಕ್ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ!
ಭಾನುವಾರ, 8 ಜನವರಿ 2023 (07:17 IST)
ಇಸ್ಲಾಮಾಬಾದ್ : ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಈಗಾಗಲೇ ಶ್ರೀಲಂಕಾ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ದಿನದಿಂದ ದಿನಕ್ಕೆ ಪಾಕಿಸ್ತಾನದ ಸ್ಥಿತಿ ದಾರುಣವಾಗ್ತಿದೆ. ಈಗಾಗಲೇ ಚಿಕನ್, ಗೋಧಿ ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ. ಇದೀಗ ಮತ್ತಷ್ಟು ಅಗತ್ಯ ವಸ್ತುಗಳ ಕೊರತೆ ಭೀತಿಯೂ ಎದುರಾಗಿದೆ.
ಆಮದು ನಿಂತುಹೋಗಿರುವ ಕಾರಣ ಅಡುಗೆ ಎಣ್ಣೆ, ತುಪ್ಪದ ಬೆಲೆಗಳು ಹೆಚ್ಚಾಗಿವೆ. ಕಸ್ಟಮ್ಸ್ ಗೋದಾಮಿನಲ್ಲಿ ಮೂರೂವರೆ ಲಕ್ಷ ಟನ್ ಅಡುಗೆ ಎಣ್ಣೆ ಸ್ಟಾಕ್ ಇದ್ದರೂ, ಅದನ್ನು ಮಾರುಕಟ್ಟೆಗೆ ತರಲು ಬ್ಯಾಂಕ್ಗಳು ಲೆಟರ್ ಆಫ್ ಕ್ರೆಡಿಟ್ಸ್, ರಿಟೈನಿಂಗ್ ಪತ್ರಗಳನ್ನು ಕ್ಲಿಯರ್ ಮಾಡ್ತಿಲ್ಲ. ಹೀಗಾಗಿ ಆಮದು ಉತ್ಪನ್ನಗಳ ಮೇಲೆ ಸರ್ಚಾರ್ಜ್ (ತೆರಿಗೆ ರೂಪದ ಸುಂಕ) ಮತ್ತು ಇತರೆ ವೆಚ್ಚಗಳು ಹೆಚ್ಚುತ್ತಿವೆ.
ಮತ್ತೊಂದೆಡೆ ಡಾಲರ್ ಎದುರು ಪಾಕ್ ರೂಪಾಯಿ ಅಪಮೌಲ್ಯ ಮುಂದುವರಿದಿದೆ. ಸದ್ಯ ವಿನಿಮಯ ಮೌಲ್ಯ ಒಂದು ಡಾಲರ್ಗೆ ಪಾಕಿಸ್ತಾನದ 228 ರೂಪಾಯಿ ಇದೆ. ಖರ್ಚು ಸರಿದೂಗಿಸಲು ಅಮೆರಿಕದಲ್ಲಿರುವ ಹಳೆಯ ರಾಯಭಾರ ಕಚೇರಿಯನ್ನೇ ಪಾಕ್ ಸರ್ಕಾರ ಮಾರಾಟ ಮಾಡಿದೆ.