Ladies and Gentlemen ಎಂದು ಇನ್ಮುಂದೆ ಪ್ರಯಾಣಿಕರನ್ನು ಸ್ವಾಗತಿಸಲ್ವಂತೆ ಈ ವಿಮಾನ ಸಂಸ್ಥೆ..ಕಾರಣವೇನು?

ಶುಕ್ರವಾರ, 16 ಜುಲೈ 2021 (08:11 IST)
ಜರ್ಮನಿ : ಪ್ರಪಂಚದಾದ್ಯಂತ ಮೂರನೇ ಲಿಂಗದವರು ಹಲವಾರು ಜನರಿದ್ದಾರೆ. ಅವರು ಗಂಡು ಅಥವಾ ಹೆಣ್ಣು ಅಲ್ಲ ಎಂದು ತಮ್ಮನ್ನು ಭಾವಿಸುತ್ತಾರೆ ಅಂತಹವರನ್ನು ಪರಿಗಣಿಸಿ ಈ ಹೊಸ ಶುಭಾಶಯ ಕ್ರಮವನ್ನು ಅಳವಡಿಸಲಾಗಿದೆ ಎಂದು ಕಂಪನಿ ಅಧ್ಯಕ್ಷರು ತಿಳಿಸಿದ್ದಾರೆ.

ಜರ್ಮನಿಯ ವಿಮಾನ ಕಂಪನಿಯಾದ ಲುಫ್ಥಾನ್ಸ ತನ್ನ ವಿಮಾನದಲ್ಲಿ ಸಾಂಪ್ರದಾಯಿಕ ಶುಭಾಶಯೊಂದಿಗೆ ಲಿಂಗ ಅಸಮಾನತೆಗಳನ್ನು ದೂರವಿಡಲು ಹೊಸ ಶುಭಾಶಯ ಸಂದೇಶವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. 'ಲೇಡೀಸ್ ಅಂಡ್ ಜಂಟಲ್ಮೆನ್, ಪ್ರಯಾಣಕ್ಕೆ ಸ್ವಾಗತ' ಎಂದು ಹೇಳುವ ಬದಲು, ಅದು ಆ ದಿನದ ಸಮಯವನ್ನು ಅವಲಂಬಿಸಿ 'ಆತ್ಮೀಯ ಅತಿಥಿಗಳೆ' ಅಥವಾ 'ಶುಭೋದಯ /ಶುಭ ಸಂಜೆ' ಮುಂತಾದ ನುಡಿಗಟ್ಟುಗಳನ್ನು ಬಳಸಲು ನಿರ್ಧರಿಸಿದೆ.
ಈ ಹೊಸ ಕ್ರಮವು ಈ ವಿಮಾನಯಾನ ಸಂಸ್ಥೆಗೆ ಮಾತ್ರ ಅನ್ವಯಿಸುವುದಿಲ್ಲ, ಆದರೆ ಜರ್ಮನಿಯ ವಿಮಾನ ಕಂಪನಿಯ ಅಡಿಯಲ್ಲಿ ಬರುವ ಸ್ವಿಸ್, ಆಸ್ಟ್ರಿಯನ್ ಏರ್ಲೈನ್ಸ್, ಯುರೋವಿಂಗ್ಸ್ ನಂತಹ ಇತರ ವಿಮಾನಯಾನ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಜರ್ಮನಿಯ ವಿಮಾನ ಕಂಪನಿ ತಿಳಿಸಿದೆ. ಕಂಪನಿಯು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, ಲುಫ್ಥಾನ್ಸ ವಕ್ತಾರ ಅಂಜಾ ಸ್ಟೆಂಗರ್  "ವೈವಿಧ್ಯತೆಯು ಕೇವಲ ಖಾಲಿ ನುಡಿಗಟ್ಟು ಅಲ್ಲ ಇದು ಅರ್ಥಪೂರ್ಣ ಅಂಶವನ್ನು ಹೊಂದಿರುತ್ತದೆ, ಇದು ಲುಫ್ಥಾನ್ಸಾಗೆ ಒಂದು ವಾಸ್ತವಿಕತೆಯಾಗಿದೆ. ಈಗಿನಿಂದ, ನಮ್ಮ ಅರ್ಥಪೂರ್ಣ ಮನೋಭಾವವನ್ನು ನಮ್ಮ ಭಾಷೆಯಲ್ಲಿಯೂ ವ್ಯಕ್ತಪಡಿಸಲು ನಾವು ಬಯಸುತ್ತೇವೆ" ಎಂದು ಕಂಪನಿ ಪತ್ರಿಕೆಯಲ್ಲಿ ವರದಿ ಮಾಡಿದೆ. ಲಿಂಗ-ತಟಸ್ಥ ಸ್ವಭಾವದ ಶುಭಾಶಯವನ್ನು ಆಯ್ಕೆ ಮಾಡಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಕಂಪನಿಯ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಅವರ ಪತ್ರಿಕಾ ವರದಿಯ ಮೂಲಕ ತಿಳಿದುಬಂದಿದೆ.
"ಲಿಂಗ ತಟಸ್ಥ" ಎಂಬ ಪದವು ಪರಿಚಯವಿಲ್ಲದವರಿಗೆ ಇದು ಒಂದು ಲಿಂಗಕ್ಕೆ ನಿರ್ದಿಷ್ಟವಲ್ಲದ ವಿಷಯಗಳ ಮಾಹಿತಿಯನ್ನು ಪೂರೈಸುತ್ತದೆ. ಆದರೆ ಪ್ರಪಂಚದಾದ್ಯಂತ ಮೂರನೇ ಲಿಂಗದವರು ಹಲವಾರು ಜನರಿದ್ದಾರೆ. ಅವರು ಗಂಡು ಅಥವಾ ಹೆಣ್ಣು ಅಲ್ಲ ಎಂದು ತಮ್ಮನ್ನು ಭಾವಿಸುತ್ತಾರೆ ಅಂತಹವರನ್ನು ಪರಿಗಣಿಸಿ ಈ ಹೊಸ ಶುಭಾಶಯ ಕ್ರಮವನ್ನು ಅಳವಡಿಸಲಾಗಿದೆ ಎಂದು ಕಂಪನಿ ಅಧ್ಯಕ್ಷರು ತಿಳಿಸಿದ್ದಾರೆ.ನಾವು ಇಲ್ಲಿ ಯಾವುದೇ ಲಿಂಗ ಬೇಧ ಮಾಡಬಾರದು ಎಂದು ಈ ಹೊಸ ಕ್ರಮವನ್ನು ಅಳವಡಿಸಿಕೊಂಡಿದ್ದೇವೆ ಎಂದು ಕಂಪನಿ ಅಧ್ಯಕ್ಷರು ತಿಳಿಸಿದ್ದಾರೆ.
ಇದರ ಹಿನ್ನೆಲೆಯಲ್ಲಿ, ಈ ಗುಂಪಿಗೆ ಸೇರಿದವರಿಗೆ ಅನುಕೂಲವಾಗುವಂತೆ ಹಲವಾರು ಸಂಸ್ಥೆಗಳು ಬದಲಾವಣೆಗಳನ್ನು ತರಲು ನಿರ್ಧರಿಸಿವೆ. ಈ ರೀತಿಯ ಬದಲಾವಣೆಗಳನ್ನು ಲುಫ್ಥಾನ್ಸ ವಿಮಾನಯಾನ ಕಂಪನಿಯನ್ನು ಹೊರತಾಗಿ ಇತರೆ ಕಂಪನಿಗಳು ಅಳವಡಿಸಿಕೊಳ್ಳಲು ನಿರ್ಧಿಸಿವೆ ಆದರಲ್ಲಿ ಒಂದು ಜಪಾನ್ ಏರ್ಲೈನ್ಸ್, ಇದು ಪ್ರಕೃತಿಯನ್ನು ಒಳಗೊಂಡ ಶುಭಾಶಯವನ್ನು ಸೇರಿಸಲು ನಿರ್ಧರಿಸಿತು.
ಲುಫ್ಥಾನ್ಸ ಈ ಹೊಸ ಸಂದೇಶ ಕ್ರಮವನ್ನು, ಇಂಟರ್ನೆಟ್ ಕಂಪನಿಯು ಶ್ಲಾಘಿಸಿತು ಮತ್ತು ಅವರ ನಡೆಯನ್ನು ಸ್ವಾಗತಿಸಿತು. ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದರೂ, ಈ ವಿಷಯದಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಕೆಲವರು ತಮ್ಮ ಅನಿಸಿಕೆಗಳನ್ನು ಇಂಟರ್ನೆಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಹೊಸ ಸಂದೇಶ ಕ್ರಮದ ಸಾಂಕೇತಿಕ ಗೆಸ್ಚರ್ ಸರಿಯಾದ ದಿಕ್ಕಿನತ್ತ ಸಾಗಲು ಒಂದು ಆರಂಭವಾಗಿದೆ ಎಂದು ಹೇಳಿದರೆ ತಪ್ಪಆಗುವುದಿಲ್ಲ. ಈ ಹೊಸ ಬದಲಾವಣೆಯು ಹಲವಾರು ಮುಖಗಳಲ್ಲಿ ಸಂತೋಷವನ್ನು ತಂದಿದೆ. ನಾವೆಲ್ಲರೂ ಈ ರೀತಿಯ ಕೆಲಸವನ್ನು ಪ್ರೋತ್ಸಾಹಿಸಬೇಕು ಹಾಗು ಅಳವಡಿಸಿಕೊಳ್ಳಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ