ಇಬ್ಬರು ಅಪರಿಚಿತರಿಂದ ಲಿಬಿಯಾ ವಿಮಾನ ಅಪಹರಣ: ಸ್ಫೋಟಿಸುವ ಬೆದರಿಕೆ

ಶುಕ್ರವಾರ, 23 ಡಿಸೆಂಬರ್ 2016 (18:02 IST)
118 ಪ್ರಯಾಣಿಕರನ್ನು ಹೊಂದಿದ್ದ ಲಿಬಿಯಾ ದೇಶದ ವಿಮಾನವನ್ನು ಹೈಜಾಕ್ ಮಾಡಲಾಗಿದ್ದು ಮಾಲ್ಟಾದ ವರದಿಗಳು ತಿಳಿಸಿವೆ.
 
ಲಿಬಿಯಾದಿಂದ 118 ಪ್ರಯಾಣಿಕರನ್ನು ಸೆಬಾ ನಗರದಿಂದ ಟ್ರೈಪೋಲಿಯತ್ತ ತೆರಳುತ್ತಿದ್ದ ಅಫ್ರಿುಕಿಯಾಹ್ ಏರ್‌ವೇಸ್‌ ಏರ್‌ಬಸ್ ಎ320 ವಿಮಾನವನ್ನು ಉಗ್ರರು ಮಾಲ್ಟಾದತ್ತ ತಿರುಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ವಿಮಾನವನ್ನು ಸ್ಫೋಟಿಸುವುದಾಗಿ ಇಬ್ಬರು ಉಗ್ರರು ಬೆದರಿಕೆಯೊಡ್ಡಿದ್ದಾರೆ ಮಾಲ್ಟೀಸ್‌ನ ಪ್ರಧಾನಮಂತ್ರಿ ಜೋಸೆಫ್‌ ಮುಸ್ಕಟ್ ತಿಳಿಸಿದ್ದಾರೆ
 
ಅಪಹರಣಗೊಂಡ ವಿಮಾನದಲ್ಲಿ ಏಳು ಮಂದಿ ಏರ್‌ವೇಸ್ ಸಿಬ್ಬಂದಿ ಸೇರಿದಂತೆ 118 ಜನರು ಪ್ರಯಾಣಿಸುತ್ತಿದ್ದಾರೆ. ಮೆಡಿಟೆರೇನಿಯನ್ ದ್ವೀಪಕ್ಕೆ ತೆಗೆದುಕೊಂಡು ಹೋಗಲಾಗಿದೆ. ಅಪಹರಣಕಾರನೊಬ್ಬ ತನ್ನ ಬಳಿ ಹ್ಯಾಂಡ್‌ ಗ್ರೇನೆಡ್ ಇರುವುದಾಗಿ ಬೆದರಿಸುತ್ತಿದ್ದಾನೆ ಎಂದು ವೈಮಾನಿಕ ಮೂಲಗಳು ತಿಳಿಸಿವೆ.
 
 ಭದ್ರತಾ ಪಡೆಗಳು ವಿಮಾನವನ್ನು ಸುತ್ತುವರೆದಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಲ್ಟಾದ ಮಾಧ್ಯಮ ವರದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ