ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

Krishnaveni K

ಸೋಮವಾರ, 25 ಆಗಸ್ಟ್ 2025 (15:16 IST)
ಬೆಂಗಳೂರು: ಮೈಸೂರು ಮಹಾರಾಜರು ಇಲ್ಲದೇ ಇದ್ದಾಗ ಟಿಪ್ಪು ಸುಲ್ತಾನ್, ಹೈದರಾಲಿ ಮೈಸೂರು ದಸರಾ ಮಾಡಿಕೊಂಡು ಹೋದ್ರು ಎಂದು ಶಾಸಕ ತನ್ವೀರ್ ಸೇಠ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಬಾರಿ ಮೈಸೂರು ದಸರಾವನ್ನು ಬಾನು ಮುಷ್ತಾಕ್ ಮಾಡುತ್ತಿರುವುದಕ್ಕೆ ಬಿಜೆಪಿ ನಾಯಕರು ವಿರೋಧಿಸುತ್ತಿದ್ದಾರೆ. ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಬಾನು ಮುಷ್ತಾಕ್ ಕನ್ನಡ ಭುವನೇಶ್ವರಿ ತಾಯಿಯನ್ನು ವಿರೋಧಿಸಿದವರು. ಅವರ ಕೈಯಿಂದ ದಸರಾ ಉದ್ಘಾಟನೆ ಮಾಡಿಸುವುದೇ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ತನ್ವೀರ್ ಸೇಠ್, ವಿಜಯನಗರ ಸಾಮ್ರಾಜ್ಯ ಇದ್ದಾಗ ದಸರಾ ಶುರುವಾಯಿತು. ನಂತರ ನಮ್ಮಲ್ಲಿ ಮಹಾರಾಜರ ಪಟ್ಟಾಭಿಷೇಕ ಆಗದೇ ಇದ್ದಾಗ ಸುಮಾರು 18 ಕ್ಕೂ ಹೆಚ್ಚು ವರ್ಷ ಕಾಲ ಟಿಪ್ಪು ಸುಲ್ತಾನ್, ಹೈದರಾಲಿ ದಸರಾ ಮುಂದುವರಿಸಿಕೊಂಡು ಹೋದರು. 1974 ರಿಂದ ಸರ್ಕಾರ ಜವಾಬ್ಧಾರಿ ವಹಿಸಿಕೊಂಡ ನಂತರ ಅನೇಕ ಮಹಾನ್ ವ್ಯಕ್ತಿಗಳು ದಸರಾ ಉದ್ಘಾಟನೆ ಮಾಡಿದ್ದಾರೆ. ದಸರಾ ಉದ್ಘಾಟನೆ ಮಾಡಲು ಜಾತಿ, ಧರ್ಮ ಗಣನೆಗೆ ಬರಲ್ಲ. ಸಾಹಿತ್ಯ ಲೋಕದಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ ಎಂಬುದಷ್ಟೇ ಮುಖ್ಯವಾಗುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ