ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

Krishnaveni K

ಸೋಮವಾರ, 25 ಆಗಸ್ಟ್ 2025 (14:10 IST)
ಬೆಂಗಳೂರು: ದೆಹಲಿ ನಾಯಕರು ಹೇಳಿದ ತಕ್ಷಣ ಎಸ್.ಐ.ಟಿ ರಚನೆ ಮಾಡಿದ್ದೀರಿ ಎಂಬುದು ಸತ್ಯ; ಆ ದೆಹಲಿ ನಾಯಕ  ಯಾರು..? ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಪ್ರಶ್ನಿಸಿದ್ದಾರೆ.
 
ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಅಭಿಯಾನದ ಪ್ರಯುಕ್ತ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಜಯನಗರದ ಮೈಯಾಸ್ ಹೋಟೆಲ್ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತದನಂತರ ಮುಂದೆ ತೆರಳಿತು. ನೈಸ್ ರಸ್ತೆಯ ಬಳಿ ನಡೆದ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಅವರು ಮಾತನಾಡಿದರು.
 
ಇದೊಂದು ಷಡ್ಯಂತ್ರ ಎಂದು ಟೀಕಿಸಿದ ಅವರು, ಈ ಪ್ರಕರಣದ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಯೂಟ್ಯೂಬ್ ವಿಡಿಯೋ ಮಾಡಿದವರ ಪರ 10 ಲಾಯರ್ ಗಳು ಬರುತ್ತಾರೆ. 5 ರಿಂದ 10 ಲಕ್ಷ ತೆಗೆದುಕೊಳ್ಳುವ ಲಾಯರ್ ಗಳು ಅವರ ಪರ ಬರುತ್ತಾರೆ. ಅಷ್ಟು ಲಾಯರ್‍ಗಳು ಬರೋದಕ್ಕೆ ಅವರಿಗೆ ಬೆಂಬಲ ಮಾಡಿರೋದು ಸಿಎಂ ಅವರೇ ಎಂದು ಆರೋಪಿಸಿದರು.
 
ಎಸ್ ಐಟಿಯಿಂದ ಸರ್ಕಾರ ಸತ್ಯ ಬಯಲಿಗೆ ತರುವ ನಂಬಿಕೆ ಇಲ್ಲ. ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ ಎಂದ ಅವರು, ಸನಾತನ ಧರ್ಮ ಮೂಲೋತ್ಪಾಟನೆ ಅಜೆಂಡಾ ಸರ್ಕಾರದ್ದು ಎಂದು ಆಕ್ಷೇಪಿಸಿದರು. ಡಿಎಂಕೆ, ಉದಯ್‍ನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಹೆಚ್‍ಐವಿ, ಕಾಲರಾಗೆ, ಹೋಲಿಕೆ ಮಾಡಿದ್ದರು. ಅದೇ ಅಜೆಂಡಾ ಇಟ್ಟಕೊಂಡೇ ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಟೀಕಿಸಿದರು.
 
ಷಡ್ಯಂತ್ರದ ಭಾಗವಾಗಿ ರಾಜ್ಯ ಸರ್ಕಾರ ಎಸ್ ಐಟಿ ರಚನೆ ಮಾಡಿ ತನಿಖೆ ಮಾಡುತ್ತಿದೆ ಎಂದರು. ಮುಸುಕುಧಾರಿ ಪೂರ್ವಪರ, ಹಿನ್ನೆಲೆ ತಿಳಿಯದೇ ಎಸ್ ಐಟಿ ರಚನೆ ಮಾಡಿದ್ದೇಕೆ? ಹಿರಿಯ ಪೆÇಲೀಸ್ ಅಧಿಕಾರಿಗಳು ಎಸ್ ಐಟಿ ರಾಜ್ಯ ರಚನೆ ಮಾಡೋದು ಬೇಡ ಅಂತಾ ಮುಖ್ಯಮಂತ್ರಿಗೆ  ಸಲಹೆ ಕೊಟ್ಟಿದ್ದರೇ? ಆದರೆ ಸಲಹೆ ಧಿಕ್ಕರಿಸಿ ಆತುರವಾಗಿ ಸಿಎಂ ಎಸ್ ಐಟಿ ರಚನೆ ಮಾಡಿದ್ದಾರಲ್ಲವೇ? ಹಿಂದೂ ಧಾರ್ಮಿಕ ಕೇಂದ್ರ ಅಲ್ಲದೇ ಬೇರೆ ಧಾರ್ಮಿಕ ಕೇಂದ್ರ ಆಗಿದ್ದರೆ ಎಸ್ ಐಟಿ ರಚನೆ ಮಾಡ್ತಾ ಇದ್ರಾ ಸಿಎಂ ಅವರೇ.. ಎಂದು ಪ್ರಶ್ನೆಗಳನ್ನು ಮುಂದಿಟ್ಟರು. 
 
ರೋಹಿತ್ ವೇಮುಲ ಕಾಯ್ದೆ ಜಾರಿ ಮಾಡಿದ ಹಾಗೇ ಎಸ್ ಐಟಿ ಕೂಡ ರಚನೆ ಮಾಡಿ ಅಂತಾ ದೆಹಲಿ ನಾಯಕರು ಹೇಳಿದ ತಕ್ಷಣ ಎಸ್ ಐಟಿ ರಚನೆ ಮಾಡಿದ್ದೀರಾ..? ಎಂದು ಅವರು ಕೇಳಿದರು. ಎಸ್‍ಐಟಿ ರಚನೆ ವಿಚಾರದಲ್ಲಿ ನಾನು ಕೆಲ ಹಿರಿಯ ಪೆÇಲೀಸ್ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ; ಹಿರಿಯ ಪೆÇಲೀಸ್ ಅಧಿಕಾರಿಗಳು ಎಸ್‍ಐಟಿ ರಚನೆ ಬೇಡ ಅಂತ ಹೇಳಿದ್ದಾರೆ ಎಂಬುದಾಗಿ ಅವರು ನನಗೆ ಮಾಹಿತಿ ನೀಡಿದ್ದಾರೆ. ಈ ಸಲಹೆಯ ಬಳಿಕವೂ ಸಿದ್ದರಾಮಯ್ಯನವರು ಎಸ್‍ಐಟಿ ರಚನೆ ಮಾಡಿದ್ದಾರೆ. ಹಾಗಿದ್ದರೆ, ಯಾರ ಒತ್ತಡದ ಮೇರೆಗೆ ಸಿದ್ದರಾಮಯ್ಯ ಈ ಎಸ್‍ಐಟಿ ರಚನೆ ಮಾಡಿದ್ದಾರೆ..? ಇದಕ್ಕೆ ಉತ್ತರ ಸಿದ್ದರಾಮಯ್ಯ ಕೊಡಬೇಕು ಎಂದು ಒತ್ತಾಯಿಸಿದರು.
 
ರೋಹಿತ್ ವೇಮೂಲ ಕಾಯ್ದೆ ಮುಂದಿಟ್ಟುಕೊಂಡು ಹಿಂದೂ ಸಮಾಜದ ಜಾತಿ ಜಾತಿ ನಡುವೆ ಒಡೆಯುವ ಕೆಲಸ ಆಗಿದೆ ಎಂದರು. ಬಳಿಕ ನೈಸ್ ರಸ್ತೆ ಬಳಿಯ ಪಿ.ಇ.ಎಸ್. ವಿಶ್ವವಿದ್ಯಾನಿಲಯದ ರಿಂಗ್ ರೋಡ್ ಹತ್ತಿರ ಶಾಸಕ ರವಿಸುಬ್ರಹ್ಮಣ್ಯ ಅವರು ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಧರ್ಮಸ್ಥಳದ ಯಾತ್ರೆಗೆ ಚಾಲನೆ ನೀಡಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ