ಕೋವಿಡ್ ನಿಯಂತ್ರಿಸಲು ಸಿಡ್ನಿಯಲ್ಲಿ ಲಾಕ್ಡೌನ್ ವಿಸ್ತರಣೆ

ಶುಕ್ರವಾರ, 20 ಆಗಸ್ಟ್ 2021 (12:13 IST)
ಸಿಡ್ನಿ: ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಸಿಡ್ನಿಯಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಲಾಕ್ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ.

ಜೂನ್ 26ರಿಂದ ಈ ನಗರದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಚಾಲಕರೊಬ್ಬರಲ್ಲಿ ಡೆಲ್ಟಾ ತಳಿ ಪತ್ತೆಯಾದ ಹತ್ತು ದಿನಗಳ ಬಳಿಕ ಲಾಕ್ಡೌನ್ ವಿಧಿಸುವ ನಿರ್ಣಯವನ್ನು ಸರ್ಕಾರ ಕೈಗೊಂಡಿತ್ತು. ಆಗಸ್ಟ್ 28ಕ್ಕೆ ಲಾಕ್ಡೌನ್ ವಾಪಸ್ ತೆಗೆದುಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಅವಲೋಕಿಸಿ ಸೆಪ್ಟೆಂಬರ್ 30ರವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಕರ್ಫ್ಯೂ ಸೇರಿದಂತೆ ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ನ್ಯೂಸೌಥ್ ವೇಲ್ಸ್ ರಾಜ್ಯದಲ್ಲಿ ಶುಕ್ರವಾರ 642 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸತತ ನಾಲ್ಕನೇ ದಿನವೂ 600ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ