ನಮ್ಮ ನೆಲದಿಂದ ಜಾಗ ಖಾಲಿ ಮಾಡಿ: ಭಾರತೀಯ ಸೇನೆಗೆ ಮಾಲ್ಡೀವ್ಸ್ ಹುಕುಂ

Krishnaveni K

ಸೋಮವಾರ, 15 ಜನವರಿ 2024 (07:45 IST)
ನವದೆಹಲಿ: ನಮ್ಮ ದೇಶದಿಂದ ಆದಷ್ಟು ಬೇಗ ನಿಮ್ಮ ಸೇನೆಯನ್ನು ಹಿಂಪಡೆಯಬೇಕು ಎಂದು ಮಾಲ್ಡೀವ್ಸ್ ದೇಶ ಭಾರತಕ್ಕೆ ಗಡುವು ನೀಡಿದೆ.

ಇತ್ತೀಚೆಗೆ ಮಾಲ್ಡೀವ್ಸ್ ಜೊತೆಗೆ ಭಾರತದ ಸಂಬಂಧ ಹಳಸಲು ಮುಖ್ಯ ಕಾರಣವೇ ಇದು. ಮೊದಲು ಮಾಲ್ಡೀವ್ಸ್ ಅಲ್ಲಿನ ಭಾರತೀಯ ಸೇನೆಯನ್ನು ಹಿಂಪಡೆಯಲು ಸೂಚಿಸಿತ್ತು. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಪ್ರವಾಸೋದ್ಯಮದ ಅವಕಾಶವನ್ನು ಜಗತ್ತಿಗೆ ಸಾರಿದ್ದು, ಮಾಲ್ಡೀವ್ಸ್ ಗೆ ನುಂಗಲಾರದ ತುತ್ತಾಗಿತ್ತು.

ಇದೇ ಕಾರಣಕ್ಕೆ ಹೊಟ್ಟೆ ಉರಿದುಕೊಂಡಿದ್ದ ಮಾಲ್ಡೀವ್ಸ್ ನಮ್ಮ ಪ್ರಧಾನಿ ಮತ್ತು ದೇಶದ ಬಗ್ಗೆ ಅವಹೇಳನಕಾರೀ ಹೇಳಿಕೆ ನೀಡಿದ್ದರು. ಇದು ಭಾರತೀಯರನ್ನು ಕೆರಳಿಸಿತ್ತು. ಇದರ ಬೆನ್ನಲ್ಲೇ ಚೀನಾಕ್ಕೆ ತೆರಳಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝುಗೆ ಅಲ್ಲಿನ ಬೆಂಬಲ ಸಿಕ್ಕಿದ್ದು, ಹುಂಬು ಧೈರ್ಯ ಬಂದಂತಾಗಿತ್ತು.

ಚೀನಾಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಮೊಯಿಝು ನಮ್ಮನ್ನು ಬೆದರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಭಾರತಕ್ಕೆ ಟಾಂಗ್ ಕೊಟ್ಟಿದ್ದರು. ಇದೀಗ ಮಾರ್ಚ್ 15 ರೊಳಗಾಗಿ ನಮ್ಮ ದೇಶದಿಂದ ನಿಮ್ಮ ಸೈನಿಕರನ್ನು ಹಿಂಪಡೆದುಕೊಳ್ಳಬೇಕು ಎಂದು ಗಡುವು ನೀಡಿದೆ. ಸರ್ಕಾರಿ ಅಂಕಿ ಅಂಶದ ಪ್ರಕಾರ 88 ಭಾರತೀಯ ಸೈನಿಕರು ಮಾಲ್ಡೀವ್ಸ್ ನಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ