ಲೈಂಗಿಕ ಉತ್ತೇಜಕ ಪಾನೀಯ ಸೇವಿಸಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ!
ನಿಮಿರುವಿಕೆ ಉತ್ತೇಜಿಸುವ ಔಷಧಿಯನ್ನು ಬೆರೆಸಿದ ಕಾಫಿ ಸೇವಿಸಿದ ವ್ಯಕ್ತಿಗೆ ಜನನಾಂಗದಲ್ಲಿ ತುರಿಕೆ, ನೋವು, ಗುಳ್ಳೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದನ್ನು ಮಾರಾಟ ಮಾಡಲು ಆರೋಗ್ಯಾಧಿಕಾರಿಗಳು ನಿಷೇಧ ಹೇರಿದ್ದರು. ಹಾಗಿದ್ದರೂ ಆನ್ ಲೈನ್ ಮಾರುಕಟ್ಟೆ ಮೂಲಕ ಖರೀದಿಗೆ ಲಭ್ಯವಿತ್ತು.
ಇದೀಗ ಆತನಿಗೆ ಅಲರ್ಜಿ ಕಂಡುಬಂದ ಹಿನ್ನಲೆಯಲ್ಲಿ ಆಂಟಿ ಬಯೋಟಿಕ್ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಔಷಧಿ ಸೇವಿಸಿದ ಇನ್ನೊಬ್ಬಾತನಿಗೂ ಅಡ್ಡಪರಿಣಾಮವಾಗಿದೆ ಎನ್ನಲಾಗಿದೆ.