ಘೋರ ಅಪರಾಧ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವುದು ಸಾಮಾನ್ಯ ಸಂಗತಿ. ಅಪರಾಧಿಗಳಿಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಮೇಲಿನ ಹಂತದ ನ್ಯಾಯಾಲಯ, ದೇಶದ ಮುಖ್ಯಸ್ಥರು ಕ್ಷಮಾದಾನ ನೀಡುವ ಮೂಲಕ ರದ್ದುಗೊಳಿಸಿದ ಉದಾಹರಣೆಗಳು ಸಾಕಷ್ಟಿವೆ. ಆದರೆ ಪ್ರಾಣಿಗೆ ಗಲ್ಲು ಶಿಕ್ಷೆ ವಿಧಿಸಿರುವ ಬಗ್ಗೆ ಕೇಳಿದ್ದೀರಾ?
ಹೌದು, ಇದು ಸತ್ಯ. ಅಮೇರಿಕಾದ ಮಿಚಿಗನ್ ನ್ಯಾಯಾಲಯದಲ್ಲಿ ನಾಯಿಯೊಂದಕ್ಕೆ ಗಲ್ಲು ಶಿಕ್ಷೆಯನ್ನು ನೀಡಲಾಗಿತ್ತು. ಜೇಬ್ ಹೆಸರಿನ ನಾಯಿಯ ಮೇಲೆ ಪಕ್ದ ಮನೆಯ ಬ್ಲಾಡ್ ಎಂಬ ಹೆಸರಿನ ನಾಯಿಯನ್ನು ಹತ್ಯೆ ಮಾಡಿದ ಆರೋಪವಿತ್ತು.
ಕಾನೂನು ಪ್ರಕಾರ ದಾಖಲಾಗಿದ್ದ ಪ್ರಕರಣವನ್ನು ವಿಚಾರಣೆಗೊಳಪಡಿಸಿದ ಸ್ಥಳೀಯ ನ್ಯಾಯಾಲಯ ಜೇಬ್‌ಗೆ ಮರಣದಂಡನೆ ವಿಧಿಸಿತ್ತು.
ಆದರೆ ಮೃತ ನಾಯಿಯ ಮೈಮೇಲೆ ದಾಳಿ ಮಾಡಿದ ಪ್ರಾಣಿಯ ರಕ್ತದ ಕಲೆಗಳು ಸಹ ಪತ್ತೆಯಾಗಿದ್ದವು. ಅವನ್ನು ಡಿಎನ್ಎ ಪರೀಕ್ಷೆಗೊಳಪಡಿಸಿದಾಗ ಅದು ಜೇಬ್‌ನದು ಅಲ್ಲವೆಂದು ತಿಳಿದು ಬಂದಿದೆ. ಹೀಗಾಗಿ ಜೇಬ್ ನಿರಪರಾಧಿ ಎಂದು ಮರು ಆದೇಶ ನೀಡಿದ ನ್ಯಾಯಾಲಯ ಆತನನ್ನು ಬಿಡುಗಡೆಗೊಳಿಸಿದೆ.
ತನ್ನ ನಾಯಿಯನ್ನು ಮರಳಿ ಪಡೆದ ಮನೆಯ ಸದಸ್ಯರು ಭಾವುಕರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ