ಪ್ರವಾಸಕ್ಕೆಂದು ಬಂದು ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆಗೆ ಸಚಿವೆ ಸುಷ್ಮಾ ನೆರವು
ಇದರಿಂದಾಗಿ ಹಣವಿಲ್ಲದೇ ಈತ ದೇವಾಲಯದ ಎದುರು ಭಿಕ್ಷಾಟನೆಗೆ ಕೂತಿದ್ದ. ಈ ವಿಷಯಕ್ಕೆ ಗಮನಕ್ಕೆ ಬಂದ ತಕ್ಷಣ ಆತನ ನೆರವಿಗೆ ಬಂದ ಸಚಿವೆ ಸುಷ್ಮಾ ತಮಿಳುನಾಡಿನಲ್ಲಿರುವ ಅಧಿಕಾರಿಗಳಿಗೆ ತಕ್ಕ ನೆರವು ನೀಡಲು ಸೂಚಿಸಿದ್ದಾರೆ. ನಿಮ್ಮ ರಷ್ಯಾ ನಮ್ಮ ಸ್ನೇಹಿತ ರಾಷ್ಟ್ರ. ಚೆನ್ನೈಯಲ್ಲಿರುವ ನಮ್ಮ ಅಧಿಕಾರಿಗಳು ನಿಮಗೆ ನೆರವು ನೀಡುತ್ತಾರೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.