ಮತ್ತೆ ಪಾಕ್ ಗೆ ಮಾತಿನಲ್ಲೇ ತಿವಿದ ಸಚಿವೆ ಸುಷ್ಮಾ
ಉಗ್ರರನ್ನು ಸಾಕಿ ಸಲಹುತ್ತಿರುವ ಪಾಕಿಸ್ತಾನದ ವಿರುದ್ಧ ಕೆಂಡಾಮಂಡಲರಾಗಿ ಮಾತನಾಡಿದ ಸುಷ್ಮಾ ‘ನಾವು ವೈದ್ಯರು, ವಿಜ್ಞಾನಿಗಳು, ತಂತ್ರಜ್ಞರನ್ನು ಬೆಳೆಸಿ ವಿಶ್ವಕ್ಕೆ ಕೊಡುಗೆಯಾಗಿ ನೀಡುತ್ತಿದ್ದೇವೆ. ಆದರೆ ಪಾಕಿಸ್ತಾನ ಏನು ಮಾಡಿದೆ? ಉಗ್ರರನ್ನು ಬೆಳೆಸುತ್ತಿದೆ’ ಎಂದು ಸುಷ್ಮಾ ಕಿಡಿ ಕಾರಿದ್ದಾರೆ. ಇನ್ನೊಂದೆಡೆ ಸಚಿವೆ ಸುಷ್ಮಾ ಮಾಡಿದ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಪೇಜ್ ಮುಖಾಂತರ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ.