ರಾಜಪಕ್ಸೆ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

ಶನಿವಾರ, 30 ಜುಲೈ 2022 (15:57 IST)
ಕೊಲಂಬೋ : ಗೊಟಬಯ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷರಾಗಿದ್ದಾಗ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು,

ಒತ್ತಾಯ ಮಾಡಿದ್ದ ಸಂದರ್ಭ ಅವರ ಮನೆಯಲ್ಲಿ ಪತ್ತೆಯಾಗಿದ್ದ ಲಂಕಾದ ಲಕ್ಷಾಂತರ ರೂ. ಹಣವನ್ನು ಶ್ರೀಲಂಕಾ ಪೊಲೀಸರು ನ್ಯಾಯಾಲಯದ ಕೈಗೆ ಒಪ್ಪಿಸಿದ್ದಾರೆ.

ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದ ಜನರು 3 ವಾರಗಳ ಹಿಂದೆ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಮನೆಗೆ ನುಗ್ಗಿ ಆಕ್ರೋಶ ಹೊರ ಹಾಕಿದ್ದರು. ಸರ್ಕಾರದ ವಿರುದ್ಧದ ದಂಗೆಗೆ ಹೆದರಿ ರಾಜಪಕ್ಸೆ ಪಲಾಯನಗೈದಿದ್ದರು.

ರಾಜಪಕ್ಸೆ ಲಂಕಾ ತೊರೆದು ಮಾಲ್ಡೀವ್ಸ್ ಹಾಗೂ ಸಿಂಗಾಪುರಕ್ಕೆ ತೆರಳಿ, ಅಲ್ಲಿ ಅವರು ಇ-ಮೇಲ್ ಮೂಲಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಅವರ ನಿವಾಸದಿಂದ 1.8 ಕೋಟಿ ಶ್ರೀಲಂಕಾ ರೂ. ಪತ್ತೆ ಮಾಡಿದ್ದರು. ಬಳಿಕ ಅದನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. 

ಕೊಲಂಬೋ ಕೇಂದ್ರೀಯ ಅಪರಾಧಗಳ ತನಿಖಾ ವಿಭಾಗದ ಉಸ್ತುವಾರಿ ಪೊಲೀಸ್ ಅಧಿಕಾರಿ ಗುರುವಾರ ನೀಡಿದ ಆದೇಶದ ಮೇರೆಗೆ ಶುಕ್ರವಾರ ಎಲ್ಲಾ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ