ಮುಷರಫ್ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್‌ ಸೀಜ್

ಶನಿವಾರ, 9 ಜೂನ್ 2018 (06:45 IST)
ಪಾಕಿಸ್ತಾನ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್‌ನ್ನು ಸೀಜ್ ಮಾಡಲು ನ್ಯಾಯಾಲಯ ಆದೇಶ ನೀಡಿದೆ.


2007ರಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆಸಿದ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜಡ್ಜ್‍ಗಳನ್ನು ಮತ್ತು ಹಿರಿಯ ನ್ಯಾಯಾಧೀಶರನ್ನು ಬಂಧಿಸಿದ ಕಾರಣದಿಂದ ಮುಷರಫ್ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿತ್ತು.ಈ ಆರೋಪ ಬಗ್ಗೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಅವರ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್‌‌ ಸೀಜ್ ಮಾಡಲು ಆದೇಶ ನೀಡಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ