ಪ್ರಧಾನಿ ಮೋದಿಗೆ ಶಾಂತಿಬೇಕು, ಭದ್ರತೆ ಪಣಕ್ಕಿಟ್ಟು ಶಾಂತಿ ಬಯಸಲ್ಲ: ಯುಎಸ್ ಅಧಿಕಾರಿ

ಶನಿವಾರ, 21 ಅಕ್ಟೋಬರ್ 2017 (21:04 IST)
ಅಮೆರಿಕ: ಪ್ರಧಾನಿ ನರೇಂದ್ರ ಮೋದಿ ದೇಶದ ಭದ್ರತೆ ಪಣಕ್ಕಿಟ್ಟು ಪಾಕಿಸ್ತಾನದ ಜತೆ ಶಾಂತಿ ಬಯಸುವುದಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಧಾನಿ ಮೋದಿ ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಬೇಕೆಂದು ಬಯಸುತ್ತಿದ್ದಾರೆ. ಇದು ಎಲ್ಲರಿಗೂ ತಿಳಿದಿದೆ. ಆದರೆ ಭಾರತದ ಭದ್ರತೆಯನ್ನ ಪಣಕ್ಕಿಟ್ಟು ಶಾಂತಿ ಮುಂದುವರಿಸಲಾರರು. ಆದ್ದರಿಂದ ಪಾಕ್‌ ಜತೆ ಶಾಂತಿ ಮಾತುಕತೆ ಆರಂಭಿಸಬೇಕೆ ಅಥವಾ ಬೇಡವೇ ಎಂಬುದು ಅವರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಭಾರತ ಮತ್ತು ಪಾಕ್‌ ಉಭಯ ರಾಷ್ಟ್ರಗಳು ಮಾತುಕತೆಗೆ ಮುಂದಾಗಬೇಕೆಂದು ಬಯಸುತ್ತೇವೆ. ಪರಸ್ಪರ ಮಾತುಕತೆ  ಮೂಲಕ ವಿಶ್ವಾಸ ವೃದ್ಧಿಗೆ ಮುಂದಾಗುವುದು ಮುಖ್ಯ. ಹೀಗಾಗಿ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆ ಸಾಧ್ಯವಾಗುತ್ತದೆ.  ಉಭಯ ದೇಶಗಳ ಸಮೃದ್ಧಿಯ ಮಟ್ಟವೂ ಹೆಚ್ಚುತ್ತದೆ ಎಂದಿದ್ದಾರೆ.

ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ರೆಕ್ಸ್‌ ಟಿಲ್ಲರ್‌ಸನ್‌ ಮುಂದಿನ ವಾರ ಭಾರತ ಹಾಗೂ ಪಾಕ್ ಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲೇ ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ