ಪಾಕ್ ಪ್ರಧಾನಿ ನವಾಜ್ ಷರೀಫ್ ಮಗಳು, ಅಳಿಯನ ಬಂಧನ
ಪಾಕಿಸ್ತಾನ: ಪಾಕ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪದಚ್ಯುತ ಪಾಕ್ ಪ್ರಧಾನಿ ನವಾಜ್ ಷರೀಫ್ ಮಗಳು ಮರ್ಯಾಮ್ ನವಾಜ್ ಮತ್ತು ಅಳಿಯ, ಮಾಜಿ ಸೇನಾ ಮುಖ್ಯಸ್ಥ ಮಹಮ್ಮದ್ ಸಫ್ದರ್ ನನ್ನು ಬೆನಜಿರ್ ಭುಟ್ಟೊ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಲಂಡನ್ ನಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಕುಟುಂಬ ಹೊಂದಿರುವ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಷ್ಟಾಚಾರ ನಿಗ್ರಹ ದಳದ ನ್ಯಾಯಮಂಡಳಿ ಎದುರು ವಿಚಾರಣೆಗೆ ಹಾಜರಾಗಲು ಷರೀಫ್ ಮಗಳು ಮತ್ತು ಅಳಿಯ ಲಂಡನ್ನಿಂದ ಇಲ್ಲಿಗೆ ಆಗಮಿಸಿದ್ದರು.