ಪಾಕಿಸ್ತಾನ ಸರ್ಕಾರಕ್ಕೆ ಜಿಹಾದ್, ಫತ್ವಾ ಘೋಷಿಸುವ ಹಕ್ಕಿದೆ, ಮೌಲ್ವಿಗಳಿಗಲ್ಲ: ಪಾಕ್ ಸಚಿವ

ಶನಿವಾರ, 7 ಅಕ್ಟೋಬರ್ 2017 (13:30 IST)
ಜಿಹಾದ್' ಮತ್ತು 'ಫತ್ವಾ'ವನ್ನು ಘೋಷಿಸುವ ಹಕ್ಕು ಸರ್ಕಾರ ಮಾತ್ರ ಹೊಂದಿದೆಯೇ ಹೊರತು ಮೌಲ್ವಿಗಳಿಗಿಲ್ಲ ಎಂದು ಪಾಕಿಸ್ತಾನದ ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಹೇಳಿದ್ದಾರೆ.
ಮೌಲ್ವಿಗಳು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಜಿಹಾದ್, ಫತ್ವಾ ಹೊರಡಿಸುವುದನ್ನು ನಿಲ್ಲಿಸಬೇಕು. ಕಾನೂನು ಉಲ್ಲಂಘಿಸಿದಲ್ಲಿ ಅಂತಹ ಮೌಲ್ವಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
 
"ಯಾವುದೇ ಬಡಾವಣೆಯಲ್ಲಿ ಯಾವುದೇ ಮೌಲ್ವಿ ಯಾರೊಬ್ಬರನ್ನೂ ಮುಸ್ಲಿಮನಲ್ಲ ಎಂದು ಘೋಷಿಸುವ ಅಧಿಕಾರವನ್ನು ಹೊಂದಿಲ್ಲ. ಇಂತಹ ಫತ್ವಾಗಳಿಂದ ಅರಾಜಕತೆ ಹರಡುತ್ತದೆ ಎಂದು ತಿಳಿಸಿದ್ದಾರೆ.
 
"ದೇಶದ ಆಂತರಿಕ ಭದ್ರತೆಯನ್ನು ಬೆದರಿಕೆ ಹಾಕಬಹುದಾದ ಇಂತಹ ಪ್ರವೃತ್ತಿಯನ್ನು ನಾವು ಕೊನೆಗೊಳಿಸಬೇಕಾಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ